ಚೆನ್ನೈ ರೈಲು ನಿಲ್ದಾಣದಲ್ಲಿ ಹಾಡುಹಗಲೇ ಇನ್ಫೋಸಿಸ್ ಮಹಿಳಾ ಉದ್ಯೋಗಿಯ ಬರ್ಬರ ಕೊಲೆ
Update: 2016-06-24 12:40 IST
ಚೆನ್ನೈ, ಜೂ.24: ಚೆನ್ನೈ ನಂಗಮ್‌ಬಾಕಮ್ ರೈಲು ನಿಲ್ದಾಣದಲ್ಲಿ ಇನ್ಫೋಸಿಸ್ ನ ಮಹಿಳಾ ಉದ್ಯೋಗಿಯೊಬ್ಬರನ್ನು ಚೂರಿಯಿಂದ ಇರಿದು ಕೊಲೆಗೈದ ಘಟನೆ ಇಂದು ಮುಂಜಾನೆ ಸಂಭವಿಸಿದೆ.
ಚೊಲೈಮೆಡುವಿನ ನಿವಾಸಿ 25ರ ಹರೆಯದ ಸ್ವಾತಿ ಎಂಬಾಕೆಯನ್ನು ಯುವಕನೊಬ್ಬನು ಚೂರಿಯಿಂದ ಇರಿದು ಕೊಲೆಗೈದು ಪರಾರಿಯಾಗಿದ್ದಾನೆ.
ಬೆಳಗ್ಗೆ ಆರು ಗಂಟೆಯ ಹೊತ್ತಿಗೆ ಈ ಘಟನೆ ನಡೆದಿದೆ. ಸ್ವಾತಿ ಅವರನ್ನು ತಂದೆ ಕೇಂದ್ರ ಸರಕಾರದ ನಿವೃತ್ತ ಉದ್ಯೋಗಿ ಸ್ವಲ್ಪ ಹೊತ್ತಿನ ಮೊದಲು ರೈಲ್ವೇ ನಿಲ್ದಾಣಕ್ಕೆ ಕರೆ ತಂದಿದ್ದರು. ಸ್ವಾತಿ ರೈಲು ಕಾಯುತ್ತಿದ್ದಾಗ ಅಲ್ಲಿಗೆ ಬಂದ ಕಪ್ಪು ಪ್ಯಾಂಟ್ ತೊಟ್ಟಿದ್ದ ದುಷ್ಕರ್ಮಿಯೊಬ್ಬ ಸ್ವಾತಿ ಮೇಲೆ ದಾಳಿ ನಡೆಸಿ ಆಕೆಯನ್ನು ಕೊಲೆಗೈದು ಪರಾರಿಯಾದ ಎಂದು ತಿಳಿದು ಬಂದಿದೆ.