×
Ad

ಪುರುಷನ ಹೊಟ್ಟೆಯಲ್ಲಿ ಗರ್ಭಕೋಶ ಪತ್ತೆ !

Update: 2016-06-24 20:47 IST

ಚೆನ್ನೈ, ಜೂ. 24 : ಅಪರೂಪದಲ್ಲೇ ಅಪರೂಪದ ಪ್ರಕರಣವೊಂದರಲ್ಲಿ 23 ವರ್ಷದ ಅಮರೀಶ್ ಎಂಬ ಪುರುಷನ ಹೊಟ್ಟೆಯಿಂದ ಗರ್ಭಕೋಶವನ್ನು ವೈದ್ಯರು ತೆಗೆದಿದ್ದಾರೆ.

ಇಲ್ಲಿನ ಇಟುಕಪಲಿ ಗ್ರಾಮದ ಅಮರೀಶ್ ವೃಷಣಗಳಲ್ಲಿ ತಡೆಯಲಾರದ ನೋವಿದೆ ಎಂದು ಚಿತ್ತೂರ್ ಜಿಲ್ಲೆಯ ಕುಪ್ಪಂ ನಲ್ಲಿರುವ ಶ್ರೀ ಪ್ರಿಯಾ ನರ್ಸಿಂಗ್ ಹೋಮ್ ನ ವೈದ್ಯರ ಬಳಿ ಬಂದಿದ್ದರು. ಅವರ ಪರೀಕ್ಷೆ ನಡೆಸಿದ ವೈದ್ಯರಿಗೆ ಏನೋ ವಿಚಿತ್ರ ಇದ್ದಂತೆ ಕಂಡಿತು. ನಿಜವಾಗಿ ವೃಷಣಗಳು ಇರಬೇಕಾದ ಜಾಗ ಖಾಲಿ ಇತ್ತು. ಆದರೆ ಆತನ ಹೊಟ್ಟೆಯಲ್ಲಿ ಒಂದು ಪೂರ್ಣ ಪ್ರಮಾಣದ ಗರ್ಭಕೋಶ ಹಾಗೂ ಅಂಡಾಶಯ ಇರುವುದು ಖಚಿತವಾಯಿತು.

ಆದರೆ ಆಶ್ಚರ್ಯವೆಂದರೆ ಈ ಅಂಡಾಶಯಗಳೇ ವೃಷಣಗಳ ಕೆಲಸ ಮಾಡುತ್ತಿದ್ದವು. ಬಳಿಕ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಗರ್ಭಕೋಶವನ್ನು ಹೊರತೆಗೆಯಲಾಯಿತು. ಇನ್ನು ಆತ ಸಾಮಾನ್ಯರಂತೆ ಬದುಕಬಹುದು ಎಂದು ವೈದ್ಯರು ಹೇಳಿದ್ದಾರೆ. 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News