ಕೇಜ್ರಿವಾಲ್ ಸರಕಾರದ 14 ಮಸೂದೆಗಳನ್ನು ಮರಳಿಸಿದ ಮೋದಿ ಸರಕಾರ

Update: 2016-06-25 05:50 GMT

ಹೊಸದಿಲ್ಲಿ,ಜೂನ್ 25:ಆಮ್ ಆದ್ಮಿ ಪಾರ್ಟಿ ಸರಕಾರ ಪಾಸುಮಾಡಿ ಅಂಗೀಕಾರಕ್ಕಾಗಿ ಕಳುಹಿಸಿದ್ದ 14 ಮಸೂದೆಗಳನ್ನು ಕೇಂದ್ರಸರಕಾರ ಮರಳಿಸಿದೆ. ಕೇಜ್ರಿವಾಲ್ ಕೂಟದ ಮುಖ್ಯ ಚುನಾವಣಾ ವಿಷಯ ಹಾಗೂ ವಾಗ್ದಾನವಾಗಿದ್ದ ಭ್ರಷ್ಟಾಚಾರತಡೆಗಾಗಿ ಲೋಕ್‌ಪಾಲ್ ಮಸೂದೆಯನ್ನೂ ಕೇಂದ್ರ ಸರಕಾರ ತಳ್ಳಿಹಾಕಿದೆ.

ವಿಧಿವಿಧಾನಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸಲಾಗಿಲ್ಲ ಎಂದು ಹೇಳಿ ಮಸೂದೆ ಅಂಗೀಕಾರವನ್ನು ನಿಷೇಧಿಸಲಾಗಿದೆ. ಆದರೆ ನಿಬಂಧನೆಗಳು ಹಾಗೂ ಪ್ರಕ್ರಿಯೆಯನ್ನು ಅನುಸರಿಸಿ ಹತ್ತು ಸಲ ಕಳುಹಿಸಿಯೂ ಅವುಗಳನ್ನು ಪಾಸು ಮಾಡದ್ದು ಈ ಮಸೂದೆಗಳನ್ನು ಪಾಸು ಮಾಡಲು ಕೇಂದ್ರಕ್ಕೆ ಇಷ್ಟ ಇಲ್ಲವೆಂಬುದಕ್ಕೆ ಸಾಕ್ಷ್ಯವಾಗಿದೆ. ಸಾಧ್ಯವಾಗುವ ರೀತಿಯಲ್ಲೆಲ್ಲ ದಿಲ್ಲಿ ಸರಕಾರದ ದಾರಿಗೆ ಅಡ್ಡಕಾಲಿಡಲು ಅವರು ಪ್ರಯತ್ನಿಸುತ್ತಿದಾರೆ ಎಂದು ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ. ಕೇಂದ್ರಸರಕಾರ ದಿಲ್ಲಿಯ ಹೆಡ್‌ಮಾಸ್ಟರ್ ಎಂಬ ನೆಲೆಯಲ್ಲಿ ವರ್ತಿಸುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

ರಾಜ್ಯ ವಿಧಾನಸಭೆಯಲ್ಲಿ ಮಸೂದೆಗಳನ್ನು ಮಂಡಿಸುವ ಮೊದಲು ಕೇಂದ್ರಕ್ಕೆ ಕಳುಹಿಸಿ ಅಂಗೀಕಾರ ಪಡೆಯಬೇಕೆಂದು ಕೇಂದ್ರ ಗ್ರಹಸಚಿವಾಲಯ ವಾದಿಸುತ್ತಿದೆ. ಆದರೆ ಹಿಂದಿನ ಸರಕಾರದ ಕಾಲದಲ್ಲಿ ಇಂತಹ ಯಾವ ನಿಬಂಧನೆಯೂಇರಲಿಲ್ಲ. ಆದರೆ ಎಪ್ಪತ್ತು ಮಂದಿಯಿರುವ ವಿಧಾನಸಭೆಯಲ್ಲಿ ವಿರೋಧಪಕ್ಷವಾಗಿ ಕೇವಲ ಬಿಜೆಪಿ ಮೂವರು ಸದಸ್ಯರು ಮಾತ್ರ ಇರುವುದರಿಂದ ಕೇಂದ್ರ ಸರಕಾರ ದಿಲ್ಲಿಯ ಪ್ರತಿಯೊಂದು ಚಲನೆಯನ್ನೂ ಕೇಂದ್ರಸರಕಾರ ಸೂಕ್ಷ್ಮ ನಿಗಾಕ್ಕೊಳಪಡಿಸುತ್ತಿದೆ. ರಾಜ್ಯಸರಕಾರದ ತೀರ್ಮಾನಗಳನ್ನು ಮತ್ತು ಮಸೂದೆಗಳನ್ನು ಲೆಫ್ಟಿನೆಂಟ್ ಗವರ್ನರ್ ಹಸ್ತಕ್ಷೇಪ ನಡೆಸಿ ತಡೆಯುವುದು ರೂಢಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News