ಉಮ್ಮನ್ ಚಾಂಡಿ ವಿರುದ್ದ ನೀಡಿದ ವಿಜಿಲೆನ್ಸ್ ತೀರ್ಪು ರದ್ದು - ಕೇರಳ ಹೈಕೋರ್ಟ್

Update: 2016-06-25 06:23 GMT

ತಿರುವನಂತಪುರಂ, ಜೂನ್ 25: ಸೋಲಾರ್‌ಪ್ರಕರಣದಲ್ಲಿ ಸರಿತಾ ಎಸ್ ನಾಯರ್ ನೀಡಿದ ಹೇಳಿಕೆಗಳಆಧಾರದಲ್ಲಿಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮತ್ತು ಮಾಜಿ ಸಚಿವ ಆರ್ಯಾಡನ್ ಮುಹಮ್ಮದ್ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ತೃಶೂರ್ ವಿಜಿಲೆನ್ಸ್ ಕೋರ್ಟ್ ಆದೇಶವನ್ನು ಹೈಕೋರ್ಟ್ ರದ್ದು ಪಡಿಸಿದೆ. ದೂರು ದೃಢವಾಗುವಂತಹದ್ದಲ್ಲ. ಆದೇಶವನ್ನು ಗಡಿಬಿಡಿಯಲ್ಲಿ ನೀಡಲಾಗಿದೆ ಎಂದು ಜಸ್ಟಿಸ್ ಬಿ. ಕಮಾಲ್ ಪಾಶ ತೀರ್ಪಿನಲ್ಲಿ ವಿವರಿಸಿದ್ದಾರೆ.

ತೃಶೂರ್ ವಿಜಿಲೆನ್ಸ್ ಕೋರ್ಟ್ ಜಡ್ಜ್ ಎಸ್.ಎಸ್. ವಾಸವನ್‌ರು ಉಮ್ಮನ್ ಚಾಂಡಿ ಮತ್ತು ಆರ್ಯಡನ್ ವಿರುದ್ಧ ತನಿಖೆಗೆ ಆದೇಶ ಹೊರಡಿಸಿದ್ದರು. ಆದರೆ ವಿಜಿಲೆನ್ಸ್ ಕೋರ್ಟ್‌ನ ಆದೇಶವನ್ನು ಹೈಕೋರ್ಟ್ ತಡೆಯಾಜ್ಞೆ ನೀಡಿತ್ತಲ್ಲದೆ. ವಿಜಿಲೆನ್ಸ್ ಜಡ್ಜ್‌ರನ್ನು ತರಾಟೆಗೆತ್ತಿಕೊಂಡಿತ್ತು. ವಿಜಿಲೆನ್ಸ್ ಕೋರ್ಟ್ ಜಡ್ಜ್ ರಾಜೀನಾಮೆಗೆ ಸಿದ್ಧವಾಗಿದ್ದು ನಂತರ ವಿವಾದವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News