ಕೋರ್ಟುರೂಮ್‌ನಲ್ಲೇ ಲೈಂಗಿಕ ಕಿರುಕುಳ ನೀಡಿದ ಬೆಂಚ್‌ಕ್ಲಾರ್ಕ್‌ನ ಬಂಧನ!

Update: 2016-06-25 06:59 GMT

ಅಲುವ,ಜೂನ್ 25: ಕೋರ್ಟ್‌ರೂಮ್‌ನಲ್ಲಿ ತಾತ್ಕಾಲಿಕ ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಬೆಂಚ್ ಕ್ಲಾರ್ಕ್‌ನನ್ನು ಬಂಧಿಸಲಾಗಿದೆ. ಯುವತಿ ದೂರು ನೀಡಿದ್ದು ಕಾಲಡಿ ನಿವಾಸಿ ಮಾರ್ಟಿನ್‌ನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ತಿಂಗಳಲ್ಲಿ ಹಲವು ಬಾರಿ ವಿಕೃತ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಕೆಲಸದ ಹೆದರಿಕೆಯಲ್ಲಿ ಎಲ್ಲವನ್ನೂ ಸಹಿಸಿದ್ದೇನೆ ಎಂದು ಯುವತಿ ದೂರಿನಲ್ಲಿ ವಿವರಿಸಿದ್ದಾಳೆ. ಬೆಳಗ್ಗೆ ಇತರ ಉದ್ಯೋಗಿಗಳು ಬರುವ ಮೊದಲು ಈತ ಯುವತಿಗೆ ಕಿರುಕುಳ ನೀಡುತ್ತಿದ್ದ. ಹೆಚ್ಚಿನ ದಿವಸಗಳಲ್ಲಿ ಆರೋಪಿ ಬೆಳಗ್ಗೆ ಒಂಬತ್ತು ಗಂಟೆಗೆ ಕೋರ್ಟ್‌ಗೆ ಬರುತ್ತಿದ್ದ. ಕೋರ್ಟ್ ಆದ್ದರಿಂದ ಯಾರೂ ಆಪರಿಸರಕ್ಕೆ ಹೋಗಿ ನೋಡುವುದಿಲ್ಲ ಇದು ಆರೋಪಿಗೆ ಯುವತಿಗೆ ಕಿರುಕುಳ ನೀಡಲು ಸಹಕಾರಿಯಾಯಿತೆನ್ನಲಾಗಿದೆ.

ಯುವತಿ ಅಳುವುದನ್ನು ಕೆಲವೊಮ್ಮೆ ನೋಡಿದ್ದರು ಸಹೋದ್ಯೋಗಿಗಲು ಮತ್ತು ಇತರರು ಅದನ್ನು ಅಷ್ಟಾಗಿ ಗಮನಿಸುವ ಗೋಜಿಗೆ ಹೋಗಿರಲಿಲ್ಲ. ತಲೆಗೆ ಹಚ್ಚಿರಲಿಲ್ಲ. ಆದರೆ ಯುವತಿ ಮಾನಸಿಕ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ಸೇರಿಸಲಾದಾಗ ಘಟನೆ ಬಹಿರಂಗವಾಗಿದೆ. ಯುವತಿಯ ದೂರು ಬಂದರೂ ಸ್ವಲ್ಪತಡವಾಗಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆರೋಪದ ಕುರಿತು ಸ್ಪಷ್ಟ ಪಡಿಸಿಕೊಳ್ಳುವ ಉದ್ದೇಶದಿಂದ ಬಂಧನವನ್ನು ವಿಳಂಬಿಸಲಾಯಿತೆಂದು ಪೊಲೀಸರು ವಿವರಿಸಿದ್ದಾರೆ.. ಎಪ್ರಿಲ್ ಮೇ ತಿಂಗಳಲ್ಲಿ ಆರೋಪಿ ಯುವತಿಯನ್ನು ಲೈಂಗಿಕ ಕಿರುಕುಳಕ್ಕೆ ಬಳಸಿದ್ದ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News