×
Ad

ವೃದ್ದೆಗೆ ಹಲ್ಲೆ; ಆಪ್ ಎಂಎಲ್‌ಎ ದಿನೇಶ್‌ ಮೋನಿಯಾ ಕಚೇರಿಯಿಂದಲೇ ಆರೆಸ್ಟ್

Update: 2016-06-25 14:16 IST

ಹೊಸದಿಲ್ಲಿ, ಜೂ.25: ಆಮ್‌ ಆದ್ಮಿ ಪಕ್ಷದ ಶಾಸಕ ದಿನೇಶ್‌ ಮೋಹನಿಯಾ ಅವರನ್ನು ಮಹಿಳೆಯೊಬ್ಬರಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ತನ್ನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡುತ್ತಿರುವಾಗ ಬಂಧಿಸಿದ ಘಟನೆ ಇಂದು ನಡೆದಿದೆ.
ತುಗಲಕ್ಬಾದ್‌ನಲ್ಲಿ  ಸಂಗಮ್‌ ವಿಹಾರದ ಶಾಸಕ ಮೋಹನಿಯಾ  ಅವರು  ಮಹಿಳೆಯೊಬ್ಬರ ಮೇಲೆ ಹಲ್ಲೆನಡೆಸಿರುವುದಾಗಿ ಅರೋಪಿಸಲಾಗಿತ್ತು. ಈ ಸಂಬಂಧ ದಿಲ್ಲಿಯ ಗೋವಿಂದಪುರಿ  ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.
ವೃದ್ದೆ ನೀರು ಪೂರೈಕೆ ಸಮಸ್ಯೆಯ ಬಗ್ಗೆ  ದೂರು ನೀಡಲು ಎಂಎಲ್‌ಎ ಕಚೇರಿಗೆ ಹೋಗಿದ್ದ ಸಂದರ್ಭದಲ್ಲಿ ಆಕೆಯೊಂದಿಗೆ ಎಂಎಲ್‌ಎ ಮತ್ತು ಬೆಂಬಲಿಗರು ಅನುಚಿತವಾಗಿ ವರ್ತಿಸಿದರೆಂದು ಹೇಳಲಾಗಿದೆ.ಈ ಅರೋಪದಲ್ಲಿ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಶಾಸಕ ದಿನೇಶ್ ದಿಲ್ಲಿ ಜಲಮಂಡಳಿಯ  ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News