ಇಬ್ಬರು ಪುತ್ರಿಯರನ್ನು ಗುಂಡಿಕ್ಕಿ ಕೊಂದ ಮಹಿಳೆಯನ್ನು ಪೊಲೀಸರು ಕೊಂದರು
Update: 2016-06-25 22:43 IST
ಫಲ್ಶಿಯರ್ (ಅಮೆರಿಕ), ಜೂ. 25: ತನ್ನ ಇಬ್ಬರು ವಯಸ್ಕ ಪುತ್ರಿಯರನ್ನು ಗುಂಡು ಹಾರಿಸಿ ಕೊಂದ ಹೂಸ್ಟನ್‌ನ ಮಹಿಳೆಯೊಬ್ಬಳನ್ನು ಪೊಲೀಸರು ಬಳಿಕ ಗುಂಡು ಹಾರಿಸಿ ಕೊಂದಿದ್ದಾರೆ.
ಹೂಸ್ಟನ್‌ನ ಉಪನಗರ ಫಲ್ಶಿಯರ್‌ನ ಅಂಚಿನಲ್ಲಿರುವ ಮನೆಯೊಂದರ ಎದುರುಗಡೆ ಶುಕ್ರವಾರ ಸಂಜೆ 5 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ.
ಘಟನೆಗೆ ಕಾರಣ ತಿಳಿದುಬಂದಿಲ್ಲವಾದರೂ, ಕುಟುಂಬದಲ್ಲಿ ನಡೆದ ಕಲಹ ವಿಕೋಪಕ್ಕೆ ತಿರುಗಿ ಗುಂಡು ಹಾರಾಟ ನಡೆದಿರುವ ಸಾಧ್ಯತೆಯಿದೆ ಎಂದು ಫೋರ್ಟ್ ಬೆಂಡ್ ಕೌಂಟಿ ಶರೀಫ್ ಟ್ರಾಯ್ ನೆಹ್ಲಸ್ ಹೇಳುತ್ತಾರೆ.
ಫಲ್ಶಿಯರ್ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಮಹಿಳೆಯು ಪುತ್ರಿಯರಿಗೆ ಗುಂಡಿಕ್ಕಿದ್ದಳು ಹಾಗೂ ತನ್ನ ಓರ್ವ ಮಗಳಿಗೆ ಮತ್ತೊಮ್ಮೆ ಗುಂಡಿಕ್ಕಲು ತಯಾರಾಗಿರುವ ರೀತಿಯಲ್ಲಿ ಆಕೆ ಕಂಡುಬಂದಾಗ ಪೊಲೀಸರು ಗುಂಡು ಹಾರಿಸಿ ಕೊಂದರು ಎಂದು ಅವರು ತಿಳಿಸಿದರು.