×
Ad

ಗುಪ್ತಚರ ಇಲಾಖೆಯ ಸೂಚನೆಯನ್ನು ನಿರ್ಲಕ್ಷಿಸಿದ ಸಿಆರ್ ಪಿಎಫ್ ; 8ಕ್ಕೇರಿದ ಮೃತಪಟ್ಟ ಯೋಧರ ಸಂಖ್ಯೆ

Update: 2016-06-26 10:54 IST

ಶ್ರೀನಗರ, ಜೂ. 26: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಪ್ಯಾಂಪೋರ್ನಲ್ಲಿರುವ ಸಿಆರ್ ಪಿಎಫ್ ಮೀಸಲು ಪಡೆ ವಾಹನಗಳ ಮೇಲೆ ನಡೆದ ಉಗ್ರರ  ದಾಳಿಯಲ್ಲಿ ಸಾವನ್ನಪ್ಪಿದ ಯೋಧರ ಸಂಖ್ಯೆ 8ಕ್ಕೇರಿದ್ದು, ಉಗ್ರರ ದಾಳಿಯ ಸಾಧ್ಯತೆಯ ಬಗ್ಗೆ ಗುಪ್ತಚರ ಇಲಾಖೆಯು ಸಿಆರ್‍ಪಿಎಫ್ ಗೆ ಮೊದಲೇ ಸೂಚನೆ ನೀಡಿತ್ತು ಎಂದು ತಿಳಿದು ಬಂದಿದೆ.
ಶನಿವಾರ ಸಂಜೆ ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ ಫಿದಾಯಿನ್ ಉಗ್ರರು ನಡೆಸಿದ  ಗು೦ಡಿನ ದಾಳಿಯಲ್ಲಿ ಕೇ೦ದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‍ಪಿಎಫ್) 8 ಯೋಧರು ಹುತಾತ್ಮರಾಗಿದ್ದಾರೆ. ಭದ್ರತಾ ಸಿಬ್ಬ೦ದಿ ನಡೆಸಿದ ಪ್ರತಿದಾಳಿಗೆ ಇಬ್ಬರು ಉಗ್ರರು ಮೃತ ಪಟ್ಟಿದ್ದರು.    ಗು೦ಡಿನ ಚಕಮಕಿಯಲ್ಲಿ 24  ಪೊಲೀಸ್ ಸಿಬ್ಬ೦ದಿ ಗಾಯಗೊ೦ಡಿದ್ದರು.  ಈ ಪೈಕಿ ನಾಲ್ವರ ಸ್ಥಿತಿ ಗ೦ಭೀರವಾಗಿದೆ.
ಯೋಧರು ಶೂಟಿ೦ಗ್ ತರಬೇತಿ ಮುಗಿಸಿ ಶ್ರೀನಗರದ ಶಿಬಿರಕ್ಕೆ ವಾಪಸಾಗುತ್ತಿದ್ದಾಗ ,ಕಾರಿನಲ್ಲಿ ಬ೦ದ ಉಗ್ರರು ಏಕಾಏಕಿ ಭದ್ರತಾ ವಾಹನಗಳ ಮೇಲೆ ಗುಂಡಿನ ದಾಳಿ  ನಡೆಸಿದ್ದಾರೆ. ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದಾಗ ಉಗ್ರರು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೇ೦ದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‍ಪಿಎಫ್) ವಾಹನಗಳ ಮೇಲೆ ಉಗ್ರರು ದಾಳಿ ನಡೆಸಲು ಸಿದ್ದತೆ ನಡೆಸುತ್ತಿದ್ದಾರೆ ಆದುದರಿಂದ  ಕಟ್ಟೆಚ್ಚರ ವಹಿಸುವಂತೆ  ಗುಪ್ತಚರ ಇಲಾಖೆಯು ಸೂಚನೆ ನೀಡಿತ್ತು ಎಂದು ಹೇಳಲಾಗಿದೆ. ಆದರೆ ಸಿಆರ್‍ಪಿಎಫ್ ಈ ಬಗ್ಗೆ ಗಮನ ಹರಿಸಿರಲಿಲ್ಲ ಎಂದು ಹೇಳಲಾಗಿದೆ.
" ನಾವು ಸಿಆರ್‍ಪಿಎಫ್ಗೆ ಉಗ್ರರ ಸಂಭವನೀಯ ದಾಳಿಯ ಬಗ್ಗೆ ಎಚ್ಚರಿಸಿದ್ದೇವು. ಹೀಗಿದ್ದರೂ ಸಿಆರ್‍ಪಿಎಫ್ ಯೋಧರು ಯಾವುದೇ ಬೆಂಗಾವಲು ವಾಹನ  ಇಲ್ಲದೆ ಬಸ್‌ ನಲ್ಲಿ ತೆರಳಿದ ವಿಚಾರದ ಬಗ್ಗೆ ಪೊಲೀಸರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News