×
Ad

ಮುಝಪ್ಫರ್‌ನಗರದಲ್ಲಿ ದಲಿತರು ಸೆಲೂನ್ ಪ್ರವೇಶಕ್ಕೆ ನಿಷೇಧ ಹೇರಿದ ಮೇಲ್ಜಾತಿಯವರು

Update: 2016-06-26 11:34 IST

ಹೊಸದಿಲ್ಲಿ,ಜೂನ್ 26:ಉತ್ತರಪ್ರದೇಶ ಮುಝಪ್ಫರ್‌ನಗರದ ಭೂಪ್‌ಖೇಡಿ ಗ್ರಾಮದಲ್ಲಿ ದಲಿತರು ಬಾರ್ಬರ್ ಶಾಪ್ ಗೆ ಹೋಗದಂತೆ ಮೇಲ್ಜಾತಿ ಠಾಕೂರ್‌ಗಳು ನಿಷೇಧ ಹೇರಿದ್ದಾರೆ. ಇದನ್ನು ಉಲ್ಲಂಘಿಸಿದರೆ ಸೆಲೂನನ್ನು ಮೇಲ್ಜಾತಿ ಗೂಂಡಾಗಳು ಮುಚ್ಚಿಸುತ್ತಿದ್ದಾರೆ. ಇದನ್ನು ದಲಿತರು ಪ್ರತಿಭಟಿಸಿದ್ದರಿಂದ ಗ್ರಾಮದಲ್ಲಿ ಸಂಘರ್ಷದ ಸ್ಥಿತಿ ನೆಲೆಸಿದೆ ಎಂದು ವರದಿಯಾಗಿದೆ.

ಗ್ರಾಮದ ದಲಿತರು ಈಗ ಬೇರೆ ಊರಿನ ಬಾರ್ಬರ್ ಶಾಪ್‌ಗಳನ್ನು ಬಳಸಬೇಕಾಗಿದೆ. ಗ್ರಾಮದಲ್ಲಿ ದಲಿತರ ವಿರುದ್ಧ ಬಹಿಷ್ಕಾರವಿದೆ ಎಂದು ತಿಳಿದು ಇತರ ಕಡೆಯಿಂದ ಯುವಕರಿಗೆ ವಿವಾಹವಾಗಲು ಹೆಣ್ಣು ಕೊಡದ ಸ್ಥಿತಿ ಈಗ ಇದೆ. ದಲಿತರಿಗೆ ಪ್ರವೇಶ ನೀಡಿದ್ದ ಕೆಲವು ಬಾರ್ಬರ್ ಶಾಪ್‌ಗಳನ್ನು ಮೇಲ್ಜಾತಿ ಗೂಂಡಾಗಳು ಇಷ್ಟರಲ್ಲೇ ಮುಚ್ಚಿಸಿದ್ದಾರೆ.

ವಿಷಯ ಗಮನಕ್ಕೆ ಬಂದ ನಂತರ ಮುಝಪ್ಫರ್‌ನಗರ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ನೀಡಿದ್ದಾರೆ. ಪತ್ರಕರ್ತರು ತಿಳಿಸಿದ ಮೆಲೆಯೇ ತನಗೆ ಸಮಸ್ಯೆ ತಿಳಿದಿದೆ ಎಂದು ಮ್ಯಾಜಿಸ್ಟ್ರೇಟ್ ಹೇಳಿದ್ದು ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News