×
Ad

ಫಲ್ಲೂಜಾ ಐಸಿಸ್‌ನಿಂದ ಸಂಪೂರ್ಣ ಮುಕ್ತ: ಇರಾಕ್

Update: 2016-06-27 00:10 IST

ಬಗ್ದಾದ್, ಜೂ.26: ಒಂದು ತಿಂಗಳಿಗೂ ಅಧಿಕ ಅವಧಿಯ ಸೇನಾ ಕಾರ್ಯಾಚರಣೆಯ ಬಳಿಕ, ಇರಾಕ್‌ನ ಫಲ್ಲೂಜಾ ನಗರವನ್ನು ಐಸಿಸ್ ಭಯೋತ್ಪಾದಕರಿಂದ ಸಂಪೂರ್ಣವಾಗಿ ವಿಮೋಚನೆಗೊಳಿಸಲಾಗಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ರವಿವಾರ ಘೋಷಿಸಿದರು.

ಐಸಿಸ್ ನಿಯಂತ್ರಣದಲ್ಲಿ ಉಳಿದಿದ್ದ ಫಲ್ಲೂಜಾದ ಕೊನೆಯ ಪ್ರದೇಶವಾಗಿರುವ ವಾಯವ್ಯ ಅಲ್-ಜುಲನ್‌ನ್ನು ಇರಾಕ್ ಪಡೆಗಳು ಪ್ರವೇಶಿಸಿವೆ ಎಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಭಯೋತ್ಪಾದಕ ನಿಗ್ರಹ ಪಡೆಯ ಮುಖ್ಯಸ್ಥ ಲೆ. ಜ. ಅಬ್ದುಲ್ ವಹಾಬ್ ಅಲ್-ಸಾದಿ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದರು.

ಮೇ ತಿಂಗಳ ಕೊನೆಯಲ್ಲಿ ಆರಂಭವಾಗಿದ್ದ ಕಾರ್ಯಾಚರಣೆ ‘‘ಮುಕ್ತಾಯಗೊಂಡಿದೆ ಹಾಗೂ ನಗರವನ್ನು ಐಸಿಸ್ ಭಯೋತ್ಪಾದಕರಿಂದ ಸಂಪೂರ್ಣವಾಗಿ ಮುಕ್ತಗೊಳಿಸಲಾಗಿದೆ’’ ಎಂದು ಅಲ್-ಸಾದಿ ಹೇಳಿದರು.
ಇರಾಕ್ ಸೇನೆಗೆ ಅಮೆರಿಕ ನೇತೃತ್ವದ ಮಿತ್ರಪಡೆಯು ವಾಯು ದಾಳಿಯ ರೂಪದಲ್ಲಿ ಬೆಂಬಲ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News