×
Ad

ಐಸ್‌ಲ್ಯಾಂಡ್: ರಾಜಕೀಯ ಹೊಸಬ ನೂತನ ಅಧ್ಯಕ್ಷ

Update: 2016-06-27 00:11 IST

ರೇಕ್‌ಜವಿಕ್ (ಐಸ್‌ಲ್ಯಾಂಡ್), ಜೂ. 26: ರಾಜಕೀಯ ಹೊಸಬ ಗುಡ್ನಿ ಜೊಹಾನ್ಸನ್ ಐಸ್‌ಲ್ಯಾಂಡ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜಯಿಯಾಗಿದ್ದಾರೆ.

‘‘ಎಲ್ಲ ಮತಗಳ ಎಣಿಕೆ ನಡೆದಿಲ್ಲ. ಆದರೆ ನಾವು ಗೆದ್ದಿದ್ದೇವೆ ಎಂದು ನನಗನಿಸುತ್ತದೆ’’ ಎಂದು ಜೊಹಾನ್ಸನ್ ತನ್ನ ಬೆಂಬಲಿಗರೊಂದಿಗೆ ಹೇಳಿದ್ದಾರೆ. 36 ಶೇಕಡಾ ಮತಪತ್ರಗಳ ಎಣಿಕೆಯಾಗಿದ್ದು, ಚಲಾವಣೆಯಾದ ಮತಗಳ 38.6 ಶೇಕಡಾದಷ್ಟನ್ನು ಅವರು ಗಳಿಸಿದ್ದಾರೆ.

ರವಿವಾರ 48ನೆ ಹುಟ್ಟಿದ ದಿನವನ್ನು ಆಚರಿಸುತ್ತಿರುವ ಜೊಹಾನ್ಸನ್‌ಗೆ ಈ ವಿಜಯ ಹುಟ್ಟುಹಬ್ಬದ ಉಡುಗೊರೆಯ ರೂಪದಲ್ಲಿ ಬಂದಿದೆ. ಇತಿಹಾಸದ ಪ್ರೊಫೆಸರ್ ಮತ್ತು ರಾಜಕೀಯ ವೀಕ್ಷಕರಾಗಿರುವ ಜೊಹಾನ್ಸನ್ ರಾಜಕೀಯ ಹುದ್ದೆಯಲ್ಲಿ ಯಾವತ್ತೂ ಇರಲಿಲ್ಲ ಹಾಗೂ ಯಾವುದೇ ರಾಜಕೀಯ ಪಕ್ಷಕ್ಕೂ ಅವರು ಸೇರಿಲ್ಲ.ಳಿತಪಕ್ಷ ವಿರೋಧಿ ಅಲೆಯ ಲಾಭವನ್ನು ಪಡೆದ ಅವರು ಅಧಿಕಾರಕ್ಕೆ ಏರಿದ್ದಾರೆ.ವರಿಗೆ ನಿಕಟ ಸ್ಪರ್ಧೆ ನೀಡಿರುವುದು 29.4 ಶೇಕಡಾ ಮತಗಳನ್ನು ಪಡೆದಿರುವ ಪಕ್ಷೇತರ ಮಹಿಳಾ ಉದ್ಯಮಿ ಹಲ್ಲಾ ಟೊಮಾಸ್‌ಡೋಟಿರ್. ಪ್ರಧಾನಿ ಸೇರಿದಂತೆ ಐಸ್‌ಲ್ಯಾಂಡ್‌ನ ಹಲವು ರಾಜಕಾರಣಿಗಳು ವಿದೇಶಗಳಲ್ಲಿ ಅಕ್ರಮವಾಗಿ ಹೂಡಿಕೆ ಮಾಡಿದ್ದಾರೆ ಎಂಬುದನ್ನು ಪನಾಮ ದಾಖಲೆಗಳು ಬಹಿರಂಗಪಡಿಸಿದ ಬಳಿಕ ದೇಶದಲ್ಲಿ ರಾಜಕಾರಣಿಗಳ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು ಹಾಗೂ ಪ್ರಧಾನಿ ರಾಜೀನಾಮೆಯನ್ನೂ ನೀಡಬೇಕಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News