×
Ad

ಅಂಚೆ -ದೂರಸಂಪರ್ಕ ವಿರುದ್ಧದ ನಷ್ಟಪರಿಹಾರ ಮೊಕದ್ದಮೆ ವಜಾ

Update: 2016-06-27 00:12 IST

ಹೊಸದಿಲ್ಲಿ, ಜೂ.26: ತನ್ನ ನೌಕರರು ಹಾಗೂ ಸಾರ್ವಜನಿಕ ಸೇವಕರು ದುರುಪಯೋಗ ಪಡಿಸಿಕೊಂಡಿರುವ 11 ಲಕ್ಷಕ್ಕೂ ಹೆಚ್ಚಿನ ಹಣವನ್ನು ತುಂಬಿಸಿಕೊಡುವಂತೆ ಸಂಪರ್ಕ ಮತ್ತು ಐಟಿ ಸಚಿವಾಲಯ ಹಾಗೂ ಅಂಚೆ ಇಲಾಖೆಗಳ ವಿರುದ್ಧ ಟೆಲಿ ಮಾರ್ಕೆಟಿಂಗ್ ಕಂಪೆನಿಯೊಂದು ದಾಖಲಿಸಿದ್ದ ಮೊಕದ್ದಮೆಯೊಂದನ್ನು ದಿಲ್ಲಿಯ ನ್ಯಾಯಾಲಯವೊಂದು ವಜಾಗೊಳಿಸಿದೆ.

ಆರೋಪಿಸಲಾಗಿರುವ ವಿಶ್ವಾಸದ್ರೋಹವನ್ನು ಕಂಪೆನಿಯ ನೌಕರರೇ ನಡೆಸಿದ್ದಾರೆ. ಆದುದರಿಂದ, ಅದನ್ನು ತುಂಬಿಸಿಕೊಡುವಂತೆ ಕೇಂದ್ರ ಸರಕಾರ ಹಾಗೂ ಅಂಚೆ ಇಲಾಖೆಗಳಲ್ಲಿ ಕೇಳಬಾರದೆಂದು ಹೇಳಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಕಾವೇರಿ ಬಜೇಜಾ ದೂರನ್ನು ತಿರಸ್ಕರಿಸಿದ್ದಾರೆ.ಸಂದರ್ಭದಲ್ಲಿ ದೂರುದಾರರ ಪ್ರಕರಣದ ಪ್ರಕಾರ, ಅದರ ನೌಕರನೇ ವಿಶ್ವಾಸದ್ರೋಹ ಮಾಡಿದ್ದಾನೆ. ಆ ಸಂಬಂಧ ಅವರು ಎಫ್‌ಐಆರ್ ದಾಖಲಿಸಿದ್ದಾರೆ. ಅವ್ಯವಹಾರವಾಗಿರುವ ರೂ. 11,46,800 ರನ್ನು ತುಂಬಿಕೊಡಲು ಪ್ರತಿವಾದಿಗಳು- ಅಂದರೆ, ಭಾರತ ಸರಕಾರ ಹಾಗೂ ಅಂಚೆ ಇಲಾಖೆಯ ಅಧಿಕಾರಿಗಳು ಬಾಧ್ಯಸ್ಥರಲ್ಲ. ಅದರಂತೆಯೇ ಪ್ರಕರಣವನ್ನು ದೂರುದಾರರ ವಿರುದ್ಧ ಹಾಗೂ ಪ್ರತಿವಾದಿಗಳ ಪರವಾಗಿ ತೀರ್ಮಾನಿಸಿ ಖುಲಾಸೆಗೊಳಿಸಲಾಗಿದೆಯೆಂದು ಅವರು ತೀರ್ಪು ನೀಡಿದ್ದಾರೆ.್ ಶಾಪಿಂಗ್ ಪ್ರೈ.ಲಿ. ಎಂಬ ಸಂಸ್ಥೆ ಆನ್‌ಲೈನ್ ಹಾಗೂ ಮಾಲು ತಲುಪಿದ ಮೇಲೆ ಹಣ ಪಾವತಿಯ ಆಧಾರದಲ್ಲಿ ಟೆಲಿಶಾಪಿಂಗ್ ಹಾಗೂ ಇಂಟರ್ನೆಟ್‌ಗಳ ಮೂಲಕ ಗ್ರಾಹಕರಿಗೆ ವಸ್ತುಗಳನ್ನು ಮಾರಾಟ ಮಾಡುತ್ತಿದೆ. 2012ರ ಫೆಬ್ರವರಿಯಲ್ಲಿ ಅದು ಅಂಚೆ ಇಲಾಖೆಯೊಂದಿಗೆ ಎಕ್ಸ್‌ಪ್ರೆಸ್ ಪಾರ್ಸೆಲ್‌ನ ಒಪ್ಪಂದ ಮಾಡಿಕೊಂಡಿತ್ತು. ಅದರನ್ವಯ ಇಲಾಖೆಯು ಗ್ರಾಹಕರಿಗೆ ವಸ್ತುಗಳನ್ನು ತಲುಪಿಸಿ, ಕಂಪೆನಿಯ ಪರವಾಗಿ ಹಣ ಸಂಗ್ರಹಿಸಬೇಕಿತ್ತು. ಅದು ಈಜಿ ಶಾಪಿಂಗ್ ಪ್ರೈ.ಲಿ. ಹೆಸರಲ್ಲಿ ಚೆಕ್ ಮುಖಾಂತರ ಕಂಪೆನಿಗೆ ಹಣ ಪಾವತಿಸಬೇಕಿತ್ತೆಂದು ಅರ್ಜಿದಾರರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News