×
Ad

ಉತ್ತರ ಪ್ರದೇಶದ ಮುಂದಿನ ಮುಖ್ಯಮಂತ್ರಿ ಪಟ್ಟ ಕಾಂಗ್ರೆಸ್‌ಗೆ !

Update: 2016-06-27 00:13 IST

ಲಕ್ನೋ ಜೂನ್ 26: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ನೀತಿ ನಿರೂಪಕರಾದ ಪ್ರಶಾಂತ್ ಕಿಶೋರ್ ಶನಿವಾರ ಪಕ್ಷದ ಕಾರ್ಯಕರ್ತರಿಗೆ ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಕಾಂಗ್ರೆಸಿನವರಾಗಿರುತ್ತಾರೆ. ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಕಳೆದ 20-25ವರ್ಷಗಳಲ್ಲೇ ಕಂಡಿರದಂತಹ ಪ್ರಚಾರವನ್ನು ಮಾಡಲಿದೆ. ರಾಯ್ಬರೇಲಿ, ಅಮೇಠಿ, ಸುಲ್ತಾನ್ಪುರ ಹಾಗೂ ಲಖ್ನೊ ವಿಭಾಗಗಳ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿದ ಅವರು, ಕಾಂಗ್ರೆಸ್‌ನಿಂದ ಟಿಕೆಟಿಗಾಗಿ 9,000 ಅರ್ಜಿಗಳು ಬಂದಿವೆ. 812 ಬ್ಲಾಕ್‌ನಲ್ಲ್ಲಿ 400 ಸ್ಥಳಗಳಲ್ಲಿ ಪಕ್ಷದ ಕಾರ್ಯಕರ್ತರು ಕಚೇರಿ ತೆರೆದಿದ್ದಾರೆ ಎಂದು ತಿಳಿಸಿದ್ದಾರೆ. 2012ರಿಂದ 2014ರವರೆಗಿನ ಎರಡು ವರ್ಷಗಳಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿಯತ್ತ ಮತ ಹರಿಯುವಿಕೆ ಹೆಚ್ಚಿದೆ. ವಿಶೇಷ ಏನೂ ಮಾಡಿಲ್ಲದಿದ್ದರೂ ಅವರ ಪ್ರಚಾರದ ಅಬ್ಬರದಿಂದಾಗಿ ಹಾಗಾಗಿದೆ. ಈ ವ್ಯಕ್ತಿ ನಮ್ಮ ಸಕಲ ಸಮಸ್ಯೆಯನ್ನು ಬಗೆಹರಿಸುತ್ತಾನೆ ಎಂದು ಜನರಿಗೆ ಅನಿಸಿದೆ ಎಂದು ವಿವರಿಸಿದ ಪ್ರಶಾಂತ್, ಚುನಾವಣೆಗೆ ಉಳಿದಿರುವ ಆರುತಿಂಗಳು ಪ್ರಚಾರ ನಡೆಸಲು ಬಹಳಷ್ಟು ಸಮಯವಾಯಿತು. ಈಗಿಂದೀಗಲೇ ಪ್ರಚಾರದಲ್ಲಿ ತೊಡಗಿಸಿಕೊಳ್ಳಿ ಎಂದು ಕಾರ್ಯಕರ್ತರಿಗೆ ತಿಳಿಸಿದ್ದಾರೆ. ದಿಲ್ಲಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತಾಡಿದ ರಾಹುಲ್ ಗಾಂಧಿ, ಉತ್ತರ ಪ್ರದೇಶದಲ್ಲಿ ಯಾರೊಂದಿಗೂ ಮೈತ್ರಿ ಇಲ್ಲ. ಕಾಂಗ್ರೆಸ್‌ನಿಂದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಎಂದು ಹೇಳಿದ್ದಾರೆ. ನೀವು ನನಗೆ ಹುಚ್ಚು ಎಂದು ಹೇಳಬಹುದು. ಆದರೆ ನಾನು ನಿಮಗೆ ಮುಂದಿನ ಮುಖ್ಯಮಂತ್ರಿ ಕಾಂಗ್ರೆಸ್‌ನದ್ದಾಗಿರಲಿದೆ ಎಂದು ಭರವಸೆ ನೀಡುತ್ತೇನೆ ಎಂದು ಪತ್ರಕರ್ತರಿಗೆ ಹೇಳಿದ್ದಾರೆ. ಕಾಂಗ್ರೆಸ್‌ನ ವಿಶೇಷ ಪ್ರಚಾರ ತಯಾರಿಯನ್ನು ಪಕ್ಷಾಧ್ಯಕ್ಷೆ ಸೋನಿಯಾಗಾಂಧಿ ಪತ್ರಕರ್ತರಿಗೆ ವಿವರಿಸಿದ್ದಾರೆ. ಆದ್ದರಿಂದ ಮೂಲ ಸವಲತ್ತುಗಳು ಕಡಿಮೆಯಿವೆ. ಹೀಗೆ ಮಾಡದವರಿಗೆ ಟಿಕೆಟ್ ಸಿಗದು ಎಂದು ಪ್ರಶಾಂತ್ ಕಿಶೋರ್ ಕಾರ್ಯಕರ್ತರಿಗೆ ನೆನಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News