ಭಾವೈಕ್ಯಕ್ಕೆ ಹೆಸರಾದ ರಸಲ್ ಮಾರ್ಕೆಟ್
ವಿಶ್ವದ ಖ್ಯಾತ ಕಂಪೆನಿಗಳಾದ ಅಲ್ವಾನಿ ಗ್ರೂಪ್ಸ್ ಆ್ ಕಂಪೆನಿ ಹಾಗೂ ವಿಶ್ವದ ಇತರೆ ಭಾಗದಲ್ಲಿ ಎಲ್ಲಿ ಡೇಟ್ಸ್ ಮತ್ತು ಡ್ರ್ರೈೂಟ್ಸ್ ಇದೆಯೋ ಆ ಎಲ್ಲಾ ಭಾಗಗಳಿಂದಲೂ ಆಮದು ಮಾಡಿಕೊಳ್ಳುತ್ತೇವೆ. ಅಲ್ಲದೆ ವಿವಿಧ ರೀತಿಯ ಹಣ್ಣುಗಳು ಲಭ್ಯವಿವೆ. 1927ರಿಂದಲೂ ನಿರಂತರವಾಗಿ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದು, ವರ್ಷದ 365 ದಿನವೂ ಮಾರಾಟವಿರುತ್ತದೆ. ಆದರೆ ರಮಝಾನ್ ಸಂದರ್ಭದಲ್ಲಿ ಹೆಚ್ಚು ಬಗೆಯ ಡೇಟ್ಸ್, ಡ್ರ್ರೈೂಟ್ಸ್ ತರಿಸಿ ಗ್ರಾಹಕರಿಗೆ ಪೂರೈಸುತ್ತೇವೆ. ಪ್ರಸ್ತುತ ಹಬ್ಬದ ಅಂಗವಾಗಿ ದಿನನಿತ್ಯ 10 ರಿಂದ 12 ಸಾವಿರ ಸಂಪಾದನೆಯಾಗುತ್ತಿದೆ.
-ಮುಹಮ್ಮದ್ ಇದ್ರೀಸ್ ಚೌಧರಿ, ಡಿ.ಎಚ್.ಫ್ರೂಟ್ ಸೆಂಟರ್
ಮುಸ್ಲಿಮ್ ಸಮುದಾಯದ ಪವಿತ್ರ ಹಬ್ಬವಾದ ರಮಝಾನ್ ಹತ್ತಿರವಾಗುತ್ತಿದ್ದಂತೆಯೇ ನಗರದಲ್ಲಿ ಹಲವು ಬಗೆಯ ತಿನಿಸುಗಳು ಭಾರೀ ಬೇಡಿಕೆಯನ್ನು ಪಡೆಯುತ್ತವೆ. ಅದರಂತೆಯೇ, ಇದೀಗ ಮುಖ್ಯವಾದ ತಿನಿಸುಗಳಲ್ಲಿ ಒಂದಾದ ಖರ್ಜೂರ ಹಾಗೂ ವಿವಿಧ ದೇಶಗಳ ಹಣ್ಣುಗಳು ನಗರದ ರಸಲ್ ಮಾರುಕಟ್ಟೆಯಲ್ಲಿ ಬಿಡಾರ ಹೂಡಿದ್ದು ಸಾರ್ವಜನಿಕರನ್ನು ಸೆಳೆಯುತ್ತಿದೆ. ನಗರದ ಶಿವಾಜಿನಗರದ ಬಸ್ ನಿಲ್ದಾಣದಿಂದ ನಾಲ್ಕು ಹೆಜ್ಜೆ ಹಾಕಿದರೆ ರಸಲ್ ಮಾರ್ಕೆಟ್ ಸಿಗುತ್ತದೆ. ಇದು ಒಂದು ಹಳೆಯ ಕಟ್ಟಡವಾಗಿದ್ದರೂ ಒಳಗಡೆ ದೇಶ-ವಿದೇಶಗಳ ನೂರಾರು ಥರದ ಹಣ್ಣುಗಳು, ಹಲವಾರು ಡ್ರೈ ಫ್ರುಟ್ಸ್‌ಗಳ ಖಜಾನೆಯೇ ಕಾಣ ಸಿಗುತ್ತದೆ.
ಮಕ್ಕಾ-ಮದೀನ, ದಕ್ಷಿಣ ಆಫ್ರಿಕ, ಜೋರ್ಡಾನ್, ತುನೀಷಿಯನ್, ಇರಾನ್, ಒಮನ್, ಟರ್ಕಿ ಹೀಗೆ ವಿಶ್ವದ ಹಲವು ಭಾಗಗಳಿಂದ 80ಕ್ಕೂ ಹೆಚ್ಚು ಬಗೆಯ ಖರ್ಜೂರಗಳು ಮಾರುಕಟ್ಟೆಗೆ ಆಗಮಿಸಿವೆ. ಪೌಷ್ಟಿಕಾಂಶ, ರುಚಿ, ಬಣ್ಣ ಹಾಗೂ ಗಾತ್ರದಿಂದ ಗ್ರಾಹಕರನ್ನು ಆಕರ್ಷಿಸುತ್ತಿರುವ ಖರ್ಜೂರಗಳು ‘ಡೆಲಿಷಿಯಸ್ ಮಳಿಗೆ’ಯಲ್ಲಿ ಸಿಗುತ್ತಿರುವುದರಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಜತೆಗೆ ಇದೇ ಮೊದಲ ಬಾರಿಗೆ ಚಾಕಲೇಟ್ ವಿತ್ ಡೇಟ್ಸ್ ಮತ್ತು ಬಿಸ್ಕೆಟ್‌ಗಳೂ ಬಂದಿದ್ದು, ಮಕ್ಕಳನ್ನು ಹೆಚ್ಚು ಸೆಳೆಯುತ್ತಿವೆ.
ಬೆಂಗಳೂರಿನಲ್ಲಿ ರಮಝಾನ್ ಹಬ್ಬವನ್ನು ಜು.7 ರಂದು ಆಚರಿಸಲಿದ್ದು, ಒಂದು ತಿಂಗಳು ಮುಂಚಿತವಾಗಿ ರೋಜಾ (ಉಪವಾಸ) ಆರಂಭವಾಗಿದೆ. ಅದರಂತೆ ಈ ಬಾರಿ ಜೂ.7 ರಿಂದ ರಮಝಾನ್ ಮಾಸ ಆರಂಭವಾಗಿದ್ದು, ಮುಸ್ಲಿಮರು ಸಡಗರ, ಸಂಭ್ರಮದಿಂದ ರೋಜಾ ಆಚರಣೆಯಲ್ಲಿ ನಿರತರಾಗಿದ್ದಾರೆ. ಅದರ ಭಾಗವಾಗಿಯೆ ನಗರದ ರಸಲ್ ಮಾರುಕಟ್ಟೆಯಲ್ಲಿ ಬೆಳಗಿನಿಂದ ರಾತ್ರಿ ಉಪವಾಸ ಅಂತ್ಯ ಮಾಡುವವರೆಗೂ ರಸ್ತೆ ತುಂಬಾ ಜನ ತುಂಬಿ ತುಳುಕುತ್ತಿರುತ್ತಾರೆ.
ನಗರದಲ್ಲಿರುವ ಈ ಮಾರುಕಟ್ಟೆ ಹೆಚ್ಚು ತಿನಿಸುಗಳಿಗೂ ಪ್ರಖ್ಯಾತಿಯನ್ನು ಪಡೆದಿದೆ. ಅದರಲ್ಲೂ ರಮಝಾನ್ ಮಾಸದಲ್ಲಿ ಎಲ್ಲಿ ನೋಡಿದರೂ ಸಮೋಸ, ಹಣ್ಣು-ಹಂಪಲುಗಳಿಂದ ಕೂಡಿರುವ ಅಂಗಡಿ ಮಳಿಗೆಗಳು ಕಾಣುತ್ತವೆ. ಹಬ್ಬದ ಮಾಸವಾಗಿರುವುದರಿಂದ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಬರುತ್ತಾರೆ. ಆದರೆ, ಇಲ್ಲಿನ ಸಮೋಸಗಳನ್ನು ಕ್ಯೂನಲ್ಲಿ ನಿಂತು ಹಿಂದೂಗಳು ಕೊಂಡು ಹೋಗುತ್ತಾರೆ. ಈ ಸ್ಥಳವೇ ವಿಶೇಷವಾಗಿದೆ. ಇಲ್ಲಿ ಮಸೀದಿ, ಮಂದಿರ, ಚರ್ಚ್ ಇರುವುದರಿಂದ ಪ್ರಾರ್ಥನೆಗೆ ಬರುವ ಎಲ್ಲ ಸಮುದಾಯದವರೂ ಸಮೋಸಗಳನ್ನು ಖರೀದಿ ಮಾಡುತ್ತಾರೆ. ಇದರಿಂದ ದಿನನಿತ್ಯ ಸುಮಾರು 2 ರಿಂದ 4 ಸಾವಿರ ವ್ಯಾಪಾರವಾಗುತ್ತದೆ ಎನ್ನುತ್ತಾರೆ ಸಮೋಸ ವ್ಯಾಪಾರಿ ರಫೀಕ್.
ಅರಬ್ ದೇಶಗಳಲ್ಲಿ ಅಜ್ವಾ ಕಿಂಗ್ ಡೇಟ್ಸ್ ತುಂಬಾ ಜನಪ್ರಿಯವಾಗಿದೆ. ಮೆಡ್‌ಜೂಲ್ ಡೇಟ್ಸ್ ಹೆಚ್ಚು ಸಿಹಿಯಾದ ತಿರುಳನ್ನು ಹೊಂದಿರುವ ದಕ್ಷಿಣ ಆಫ್ರಿಕದ ಖರ್ಜೂರವಾಗಿದೆ. ಅಲ್ಲದೆ ಇದು ಶುಗರ್ ರಹಿತವಾಗಿದ್ದು, ನೈಸರ್ಗಿಕ ಶಕ್ತಿಯುಕ್ತವಾದ ಹಣ್ಣಾಗಿರುವುದು ವಿಶೇಷವಾಗಿದೆ. ಆದುದರಿಂದ ನಿತ್ಯ ಎರಡು ಖರ್ಜೂರ ಹಾಗೂ ಒಂದು ಲೋಟ ಹಾಲು ಸೇವಿಸಿದರೆ, ದೇಹಕ್ಕೆ ಹೆಚ್ಚು ಶಕ್ತಿ ಮತ್ತು ಚೈತನ್ಯ ಬರುತ್ತದೆ ಎಂದು ಹೇಳುತ್ತಾರೆ ಸ್ಥಳೀಯ ಅಂಗಡಿಯ ಮುಹಮ್ಮದ್.
ಇದರ ಜತೆಗೆ ಈ ಬಾರಿ ಘಮಘಮಿಸುವ ಚಾಕಲೇಟ್ ಕೋಟಿಂಗ್ ಡೇಟ್ಸ್,ರೋಸ್ ್ಲೇವರ್, ಕೋಕನಟ್ ್ಲೇವರ್, ಲೈಮ್ ಮಿಂಡ್ ಇತ್ಯಾದಿಗಳ ಖರ್ಜೂರಗಳು ಮತ್ತು ಬಿಸ್ಕತ್‌ಗಳೂ ಬಂದಿರುವುದು ಮಕ್ಕಳನ್ನು ಹೆಚ್ಚಾಗಿ ಸೆಳೆಯುತ್ತಿವೆ. ಡೇಟ್ಸ್ ಮತ್ತು ಡ್ರ್ರೈೂಟ್ಸ್ ಮಿಶ್ರಣದ ಸೌದಿ ಹಲ್ವಾ ರಮಝಾನ್‌ಗೆ ವಿಶೇಷವಾಗಿ ಮಾರಾಟವಾಗುತ್ತಿದೆ.
ಮಕ್ಕಾ ಮದೀನಾದ ಮಾಂಬ್ರು, ದಕ್ಷಿಣ ಆಫ್ರಿಕದ ಮೆಡ್ಜೋಲ್ ಡೇಟ್ಸ್, ತುರ್ಕಿಯ ಅಂಜೂರಾ, ಇರಾನ್ ಡೇಟ್ಸ್, ಸುರ್ಕಿ ಡೇಟ್ಸ್, ಝಾಹೇದಿ ಡೇಟ್ಸ್, ಸೌದಿ ಅರೇಬಿಯಾದ ಅಜ್ವಾ ಡೇಟ್ಸ್ ಹಾಗೂ ವಿವಿಧ ಬಗೆಯ ಸುಮಾರು 80ಕ್ಕೂ ಹೆಚ್ಚು ಬಗೆಯ ಖರ್ಜೂರಗಳಿವೆ. ಇದಲ್ಲದೆ ಬ್ರೆಝಿಲ್ ನಟ್ಸ್, ಆಸ್ಟ್ರೇಲಿಯಾದ ಹೆಜಲ್ ನಟ್ಸ್, ಇರಾನ್‌ನ ಒಣ ಅಂಜೂರ, ಇರಾನಿ ಬಾದಾಮಿ... ಇವೆಲ್ಲವೂ ನಗರದ ರಸೆಲ್ ಮಾರುಕಟ್ಟೆಯಲ್ಲಿನ ಡೆಲಿಷಿಯಸ್ ಮಳಿಗೆಯಲ್ಲಿ ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ. ಇಲ್ಲಿ ಸಿಗುತ್ತಿರುವ ವಸ್ತುಗಳ ಬೆಲೆ ಕೆ.ಜಿ.ಗೆ 200 ರೂ. ನಿಂದ 6 ಸಾವಿರ ರೂ.ವರೆಗಿವೆ. ಅದೇ ರೀತಿ ಅಮೆರಿಕದ ಬಾದಾಮಿ 600 ರೂ.ಗೆ ಲಭಿಸಿದರೆ, ಇರಾನಿ ಬಾದಾಮಿ (ಮಾಮ್‌ರಾ) 2,500 ರೂ.ನಿಂದ 4,000 ರೂ.ವರೆಗಿದೆ.
ಇರಾನ್ ಅಂಜೂರ 1,600-1,800 ರೂ. ಬೆಲೆಯಿದೆ. ತುನೀಷಿಯನ್ ಫ್ರೆಶ್ ಡೇಟ್ಸ್ ಗಿಡ ಸಮೇತ ದೊರೆಯುತ್ತಿದ್ದು, ಇದು ಕೆ.ಜಿ.ಗೆ 1,200 ರೂ. ಇದ್ದು, ಕಡುಕಪ್ಪು, ಕಂದು, ಮಿಶ್ರ ಬಣ್ಣದ ಡೇಟ್ಸ್‌ಗಳು ಬಿಡಿ ಬಿಡಿಯಾಗಿ, ಪ್ಯಾಕ್‌ಗಳಲ್ಲಿಯೂ ಲಭ್ಯ.
ಗಮನ ಸೆಳೆಯುತ್ತಿವೆ ವಿದೇಶಿ ಖರ್ಜೂರ, ಹಣ್ಣುಗಳು
ಮೂಳೆಯ ಕ್ಯಾಲ್ಷಿಯಂ ಕೊರತೆಯನ್ನು ನೀಗಿಸುತ್ತದೆ. ಮಲಬದ್ಧತೆ ಸಮಸ್ಯೆಯಿದ್ದರೆ ರಾತ್ರಿ ನೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಉತ್ತಮ ಲಿತಾಂಶ ನೀಡುತ್ತದೆ. ಅಸಿಡಿಟಿ, ಎದೆ ಉರಿಯನ್ನು ನಿವಾರಿಸುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಖರ್ಜೂರ ತುಂಬಾ ಸಹಕಾರಿಯಾಗಿದೆ. ಇದಲ್ಲದೆ ಹೃದ್ರೋಗ ಕಾಯಿಲೆಯನ್ನೂ ತಡೆಯುವ ಶಕ್ತಿ ಖರ್ಜೂರಕ್ಕಿದೆ.