ಎಲ್ಲರ ಅಚ್ಚುಮೆಚ್ಚಿನ ರೂಹ್ ಅಫ್ಝದ ಯಶೋಗಾಥೆ ಇಲ್ಲಿ ಓದಿ
ಇಫ್ತಾರ್‌ಗಳಲ್ಲಿ ರೂಹ್ ಅಫ್ಝದ ಬಹಳ ಜನಪ್ರಿಯ ಪಾನೀಯ. ಲಿಂಬೆ ಮತ್ತು ನೀರಿನ ಜೊತೆಗೆ ಇದನ್ನು ಸೇವಿಸಬಹುದು. ಹಲವರು ಇದಕ್ಕೆ ತಂಪಾದ ಹಾಲು ಬೆರೆಸಿ ರೋಸ್ ಫ್ಲೇವರ್ ಇರುವ ಪಾನೀಯವಾಗಿ ಮಾಡುತ್ತಾರೆ.
ಆದರೆ ಇದೇ ರೂಹ್ ಅಫ್ಝಾಗೆ ನೂರು ವರ್ಷಗಳ ಉಪಖಂಡದ ವಿಭಜನೆಗೂ ಹಿಂದಿನ ಇತಿಹಾಸವಿದೆ ಎನ್ನುವುದು ಹಲವರಿಗೆ ತಿಳಿದಿಲ್ಲ. ಮೂಲತಃ ಉನಾನಿ ಹಕೀಂ ಅಥವಾ ವೈದ್ಯರು ಗಿಡಮೂಲಿಕೆಗಳಿಂದ ಇದನ್ನು ಬೇಸಗೆಯ ಬಿಸಿಯಿಂದ ತಪ್ಪಿಸಿಕೊಳ್ಳಲು ತಯಾರಿಸಿದ್ದರು. ನಂತರ ಇದು ಭಾರತ ಮತ್ತು ಪಾಕಿಸ್ತಾನೀ ಪ್ರಾಂತದಲ್ಲಿ ಜನಪ್ರಿಯವಾಯಿತು. 1908ರಲ್ಲಿ ಹಳೇ ದೆಹಲಿಯಲ್ಲಿ ಹಕೀಂ ಹಾಫಿಜ್ ಅಬ್ದುಲ್ ಮಜೀದ್ ಗಿಡಮೂಲಿಕೆಗಳ ಮಿಶ್ರಣದ ಜೊತೆಗೆ ಬೇಸಗೆಗೆ ತಂಪು ಪಾನೀಯ ರೂಪಿಸಿದ್ದರು. ಗಿಡಮೂಲಿಕೆಗಳ ಸಿರಪ್ ಅನ್ನು ಯುನಾನಿ ವೈದ್ಯ ಎಂದು ಕುಡಿಯಲು ಕೊಡಲಾಗುತ್ತಿತ್ತು. ಬಿಸಿಯಿಂದ ಗಾಯಗಳಾದವರಿಗೆ, ನೀರಿನ ಕೊರತೆ ನಿವಾರಿಸಲು ಕೊಡಲಾಗುತ್ತಿತ್ತು. ಅವರು ಅದಕ್ಕೆ ರೂಹ್ ಅಫ್ಝಾ ಎಂದು ಹೆಸರಿಟ್ಟರು. ಉರ್ದುವಿನಲ್ಲಿ ಇದರ ಅರ್ಥ ಆತ್ಮದ ತಾಜಾತನ.
ಮಿರ್ಜಾ ನೂರ್ ಅಹಮದ್ ಎನ್ನುವ ಕಲಾವಿದ ರೂಹ್ ಅಫ್ಝಾದ ಲೇಬಲ್‌ಗಳನ್ನು ಹಲವು ಬಣ್ಣಗಳಲ್ಲಿ 1910ರಲ್ಲಿ ತಯಾರಿಸಿದ. ಆಗ ದೆಹಲಿಯಲ್ಲಿ ಬಣ್ಣದ ಮುದ್ರಣ ಇಲ್ಲವಾದ ಕಾರಣ ಈ ಲೇಬಲ್‌ಗಳನ್ನು ಮುಂಬೈನಲ್ಲಿ ಮುದ್ರಿಸಲಾಯಿತು. ದಶಕಗಳ ನಂತರ ಅಬ್ದುಲ್ ಮಜೀದ್ ಈ ವೈದ್ಯವನ್ನು ಪಾನೀಯವಾಗಿ ಬದಲಿಸಲು ನಿರ್ಧರಿಸಿದರು. ಹೀಗೆ ರೂಹ್ ಅಫ್ಝಾ ಪಾನೀಯವಾಗಿ ಬಂತು. ಮೊದಲಿಗೆ ರೂಹ್ ಅಫ್ಝಾ ತಯಾರಿಸಿದಾಗ ಅದರ ರುಚಿ ಎಷ್ಟು ಚೆನ್ನಾಗಿತ್ತೆಂದರೆ ಅದೇನೆಂದು ತಿಳಿದುಕೊಳ್ಳಲೇ ಜನ ಸೇರಿದ್ದರು. ಗಂಟೆಯೊಳಗೆ ಪಾನೀಯ ಮಾರಾಟವಾಗಿತ್ತು ಎನ್ನುತ್ತಾರೆ ಹಕೀಂ ಹಫೀಜ್‌ರ ಮರಿಮೊಮ್ಮಗ ಅಬ್ದುಲ್ ಮಜೀದ್. ಇಂದು ಅವರು ಹಮದರ್ದ್ ಇಂಡಿಯಾದ ಮುಖ್ಯ ಕಾರ್ಯಕಾರಿ ಅಧಿಕಾರಿ. ಕುಟುಂಬದ ಕೆಲಸ ಮುಂದುವರಿಸಿ ಈ ವೈದ್ಯವನ್ನು ಜನಸಮೂಹಕ್ಕೆ ಅಗ್ಗದ ಬೆಲೆಗೆ ಕೊಡುತ್ತಿದ್ದಾರೆ.
ಪಾರಂಪರಿಕ ವೈದ್ಯ ಕಲೆಗೆ ಹೆಸರಾದ ಕುಟುಂಬದಲ್ಲಿ ಬೆಳೆದ ಅಬ್ದುಲ್ ಮಜೀದ್ ಪಾನೀಯ ಪ್ರಚಾರಕ್ಕೆ ಅಂತಹ ಹಲವು ಕತೆಗಳನ್ನು ಆಶ್ರಯಿಸಿದ್ದಾರೆ. ನಮ್ಮ ಕುಟುಂಬಕ್ಕೆ ರೂಹ್ ಅಫ್ಝಾವನ್ನು ಪಾನೀಯವಾಗಿ ಬಾಯಾರಿಕೆ ನೀಗಿಸಲು ಬಳಸಬಹುದೆಂದು ತಿಳಿದಾಗ ಅದರ ಪ್ರಚಾರಕ್ಕೆ ಸಾಕಷ್ಟು ಪ್ರಯತ್ನಿಸಿದ್ದರು. ಒಮ್ಮೆಯಂತೂ ಕರಪತ್ರ ಮಾಡಿ ಸುಮ್ಮನೆ ಗಾಳಿಯಲ್ಲಿ ಎಸೆದಿದ್ದರು. ಹಾಗೆ ಬಹಳ ಮಂದಿಗೆ ಇದರ ಬಗ್ಗೆ ತಿಳಿಯುವ ಪ್ರಯತ್ನ ಅವರದ್ದಾಗಿತ್ತು ಎನ್ನುತ್ತಾರೆ ಮಜೀದ್. ಭಾರತದ ವಿಭಜನೆ ದೊಡ್ಡ ತಿರುವು. ಅದು ರೂಹ್ ಅಫ್ಝಾ ಕುಟುಂಬವನ್ನೂ ವಿಭಜಿಸಿತು. 1947ರಲ್ಲಿ ಕುಟುಂಬದ ಬಹುತೇಕರು ಪಾಕಿಸ್ತಾನಕ್ಕೆ ಹೋದರು. ನನ್ನ ಮುತ್ತಜ್ಜ ಹಕೀಂ ಅಬ್ದುಲ್ ಹಮೀದ್ ತಮ್ಮ ಇಬ್ಬರು ಮಕ್ಕಳ ಜೊತೆಗೆ ಇಲ್ಲಿ ನಿಂತರು. ಅವರ ಚಿಕ್ಕ ಸಹೋದರ ಹಕೀಂ ಮೊಹಮ್ಮದ್ ಕೂಡ ಪಾಕಿಸ್ತಾನಕ್ಕೆ ಹೋದರು. ಇದು ನನ್ನ ತಾಯ್ನೆಲವಾದ ಕಾರಣ ನಾನು ಭಾರತ ಬಿಡಲಾಗಲಿಲ್ಲ ಎಂದು ಮುತ್ತಜ್ಜ ಹೇಳುತ್ತಿದ್ದರು ಎನ್ನುತ್ತಾರೆ ಮಜೀದ್. ಒಬ್ಬ ಸಹೋದರ ಭಾರತದಲ್ಲಿ ಮತ್ತು ಇನ್ನೊಬ್ಬ ಪಾಕಿಸ್ತಾನದಲ್ಲಿ ತಮ್ಮದೇ ರೀತಿಯಲ್ಲಿ ರೂಹ್ ಅಫ್ಝಾ ಉದ್ಯಮ ಆರಂಭಿಸಿದರು. ಭಾರತದಲ್ಲಿ ಈಗಾಗಲೇ ಉದ್ಯಮ ಬೆಳೆದಿತ್ತಾದರೂ ಪಾಕಿಸ್ತಾನದಲ್ಲಿ ಬೆಳೆಸಲು ಮೊಹಮ್ಮದ್ ಸಾಯಿದ್‌ಗೆ ಸ್ವಲ್ಪ ಕಷ್ಟವಾಗಿತ್ತು.
ಪಾಕಿಸ್ತಾನದ ಹಮ್‌ದರ್ದ್ ಲ್ಯಾಬೋರೇಟರಿಗಳ ಅಧ್ಯಕ್ಷೆ ಮತ್ತು ಹಮ್‌ದರ್ದ್ ಫೌಂಡೇಶನ್ ಅಧ್ಯಕ್ಷೆ ಸಾದಿಯಾ ರಶೀದ್ ಪ್ರಕಾರ, ಮೊಹಮ್ಮದ್ ಸೈದ್ 1948 ಜನವರಿ 9ರಂದು ಪಾಕಿಸ್ತಾನಕ್ಕೆ ವಲಸೆ ಬಂದಿದ್ದರು. ದೇಶ ಬಿಟ್ಟ ಮೇಲೆ ಬಹಳ ಕಷ್ಟ ಅನುಭವಿಸಿದ್ದರು. ಕರಾಚಿಯ ಹಳೇ ಪ್ರಾಂತ ಅರಂಭಾಗ್‌ನಲ್ಲಿ ರು. 12 ಮೌಲ್ಯದ ಪೀಠೋಪಕರಣಗಳ ಜೊತೆಗೆ ಎರಡು ಕೋಣೆಯ ಬಾಡಿಗೆ ಮನೆಯಲ್ಲಿ ಹಮ್‌ದರ್ದ್ ಫೌಂಡೇಶನ್ ಆರಂಭಿಸಿದ್ದರು. 1953ರಲ್ಲಿ ಹಮ್‌ದರ್ದ್ ಲ್ಯಾಬೋರೇಟರೀಸ್ ಪಾಕಿಸ್ತಾನ ಅಂತಿಮವಾಗಿ ಲಾಭದಾಯಕವಾಯಿತು. ರೂಹ್ ಅಫ್ಝಾ ಎನ್ನುವ ಹೆಸರು ಒಂದು ಪುಸ್ತಕದ ಪಾತ್ರ. ಅದೇ ಹೆಸರನ್ನು ಆರಿಸಿ ಇಡಲಾಗಿದೆ. ವಿಭಜನೆಯಿಂದ ಬ್ರಾಂಡ್‌ಗೆ ಧಕ್ಕೆಯಾಗಿಲ್ಲ. ಪಾಕಿಸ್ತಾನದಲ್ಲಿ ಎಲ್ಲವೂ ಬೀಜದಿಂದ ಶುರುವಾಗಿದೆ. ಹೀಗಾಗಿ ಬ್ರಾಂಡ್ ಕಟ್ಟಲು ತಡವಾಯಿತು. ಆರಂಭದಲ್ಲಿ ಕೆಲವು ನೂರು ರೂಹ್ ಅಫ್ಝಾ ಮಾರಾಟವಾಗುತ್ತಿತ್ತು. ಆದರೆ ಈಗ ಮಿಲಿಯಗಟ್ಟಲೆ ವ್ಯವಹಾರವಿದೆ ಎನ್ನುತ್ತಾರೆ ಸಾದಿಯಾ.
ಪ್ರತೀ ವರ್ಷ ಶೇ. 20ರಷ್ಟು ಮಾರುಕಟ್ಟೆ ಪ್ರಗತಿಯನ್ನು ಪಾನೀಯ ಪಡೆದುಕೊಳ್ಳುತ್ತಿದೆ. ಇತರ ವೇಗವಾಗಿ ಬೆಳೆಯುತ್ತಿರುವ ಸರಕುಗಳ ನಡುವೆ ಇದು ಅತ್ಯುತ್ತಮ ಪ್ರಗತಿಯಾಗಿದೆ.
ಕೃಪೆ:gulfnews.com