×
Ad

1975ರ ತುರ್ತುಪರಿಸ್ಥಿತಿಗೆ 41 ವರ್ಷ : ನಿಮ್ಮ ಮಾಹಿತಿಗಾಗಿ 12 ಮುಖ್ಯಾಂಶಗಳು

Update: 2016-06-27 10:15 IST

41 ವರ್ಷಗಳ ಹಿಂದೆ 1975ರಲ್ಲಿ ಭಾರತ ಸ್ವಾತಂತ್ರ್ಯಾನಂತರದ ಕರಾಳ ದಿನಗಳನ್ನು ಕಂಡಿತು. ಭಾರತದ ಆಗಿನ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದರು. ದೇಶದ ನಾಗರಿಕರಿಗೆ ಇದು ಅತೀ ಕಠಿಣ ದಿನಗಳಾಗಿದ್ದವು. ರಾಷ್ಟ್ರಪತಿ ಫಖ್ರುದ್ದೀನ್ ಅಲಿ ಅಹಮದ್ 352(1)ನೇ ವಿಧಿ ಪ್ರಕಾರ ತುರ್ತುಪರಿಸ್ಥಿತಿ ಘೋಷಿಸಿದ್ದರು. 1975 ಜೂನ್ 25ರಂದು ಘೋಷಿಸಿದ ತುರ್ತು ಪರಿಸ್ಥಿತಿ 1977 ಮಾರ್ಚ್ 21ರವರೆಗೆ 21 ತಿಂಗಳು ಮುಂದುವರಿದಿತ್ತು.

ತುರ್ತುಪರಿಸ್ಥಿತಿಯ ದಿನಗಳ ಕೆಲವು ಸತ್ಯಾಂಶಗಳು ಇಲ್ಲಿವೆ.

1. ಸ್ವಾತಂತ್ರ್ಯಾನಂತರ ಇದು ಭಾರತದ ಮೂರನೇ ತುರ್ತುಪರಿಸ್ಥಿತಿ.

2. 1971ರಲ್ಲಿ ಪಾಕಿಸ್ತಾನದ ಜೊತೆಗಿನ ಯುದ್ಧ ದೇಶಕ್ಕೆ ದೊಡ್ಡ ಹಾನಿ ತಂದಿತ್ತು. ಬರ ಮತ್ತು ತೈಲ ಬಿಕ್ಕಟ್ಟಿನಿಂದ ಅರ್ಥವ್ಯವಸ್ಥೆ ಕುಸಿದು ಸಂಘರ್ಷದ ಮಟ್ಟ ಏರಿತ್ತು.

3. ಮುಷ್ಕರಗಳು ಮತ್ತು ಪ್ರತಿಭಟನೆಗಳು ಎಲ್ಲಾ ಕಡೆ ನಡೆಯುತ್ತಿದ್ದವು. ರಾಜಕೀಯ ವಿಪಕ್ಷದ ಏಳಿಗೆ ಆರ್ಥಿಕ ಸಮಸ್ಯೆಗೆ ಕಾರಣವಾಗಿತ್ತು.

4. ಆ ಸಮಯದಲ್ಲಿ ಇಂದಿರಾಗಾಂಧಿ 20 ಅಂಶಗಳ ಕಾರ್ಯಕ್ರಮವನ್ನು ತಂದು ಅರ್ಥವ್ಯವಸ್ಥೆಗೆ ನೆರವಾಗುವುದು ಮತ್ತು ಬಡತನ ಮತ್ತು ಸಾಕ್ಷರತೆಯ ಸಮಸ್ಯೆ ನಿವಾರಿಸಲು ಪ್ರಯತ್ನಿಸಿದರು.

5. ಸೆನ್ಸರ್‌ಶಿಪ್ ಅತೀ ಮುಖ್ಯಪಾತ್ರವಹಿಸಿತು. ಮಾಧ್ಯಮಗಳು, ಸಿನಿಮಾ ಮತ್ತು ಇತರ ಕಲಾರೂಪದ ಮೇಲೆ ಸೆನ್ಸರ್ ಬಂತು. ರಾಜಕೀಯ ನಾಯಕರನ್ನು ಮನಬಂದಂತೆ ಸರ್ಕಾರ ಜೈಲಿಗಟ್ಟಿತು.

6. ರಾಜಕೀಯ ನಾಯಕರು ಮತ್ತು ಪ್ರತಿಭಟನಾಕಾರರು ಭೂಗತರಾಗಿ ಪ್ರತಿಭಟನೆ ಮುಂದುವರಿಸಿದರು. ಗಾಂಧಿ ಕುಟುಂಬ ಅಧಿಕಾರವನ್ನು ಪೂರ್ಣವಾಗಿ ಬಳಸಿಕೊಂಡಿತು.

7. ಚುನಾವಣೆಗಳನ್ನು ಮುಂದೂಡಲಾಯಿತು.

8. ದೇಶದ ಆಗಿನ ಕಾನೂನುಗಳು ನಿಧಾನಗತಿಯವರು ಎಂದು ಇಂದಿರಾಗಾಂಧಿ ತಿಳಿದಿದ್ದರು. ಹೀಗಾಗಿ ಕಾನೂನನ್ನು ಮರಳಿ ಬರೆಯಲು ಪ್ರಯತ್ನಿಸಿದರು.

9. ಆಕೆಯ ಕ್ರಮಗಳ ಬಗ್ಗೆ ತೀವ್ರ ಟೀಕೆಗಳು ಬಂದವು.

10. 1977ರಲ್ಲಿ ತುರ್ತುಪರಿಸ್ಥಿತಿ ಮುಗಿದು ನಡೆದ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷ ಗಾಂಧಿ ಮನೆತನವನ್ನು ಸೋಲಿಸಿ ಅಧಿಕಾರಕ್ಕೆ ಬಂದಿತು.

11. ಮಾಧ್ಯಮಗಳು ಬಹಳ ಹಾನಿಗೊಳಗಾದವು. ಪತ್ರಿಕೆಗಳಲ್ಲಿ ಹೋಗುವುದೆಲ್ಲವನ್ನೂ ಸರ್ಕಾರ ಮೊದಲು ಪರಿಶೀಲಿಸಿತು. ತುರ್ತುಪರಿಸ್ಥಿತಿಯ ನಂತರ ಸಂಪಾದಕೀಯದ ಬದಲು ಖಾಲಿ ಹಾಳೆ ಪ್ರಕಟಿಸಿತು.

12. ಜನರು ಪ್ರಾಣ ಕಳೆದುಕೊಂಡರೂ ವರದಿಯಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News