×
Ad

4 ವರ್ಷದ ತಮ್ಮನನ್ನು ಗುಂಡಿಕ್ಕಿ ಕೊಂದ 6 ವರ್ಷದ ಅಣ್ಣ !

Update: 2016-06-27 13:11 IST

ನ್ಯೂಯಾರ್ಕ್, ಜೂನ್ 27: ಅಮ್ಮನ ಬಂದೂಕು ತೆಗೆದು ಆಟವಾಡಿದ ಆರುವರ್ಷ ವಯಸ್ಸಿನ ಬಾಲಕನಿಂದಾಗಿ ನಾಲ್ಕುವರ್ಷ ವಯಸ್ಸಿನ ತಮ್ಮ ಮೃತನಾದ ಘಟನೆ ನ್ಯೂಜರ್ಸಿಯ ಅಪಾರ್ಟ್‌ಮೆಂಟೊಂದರ ಮೂರನೆ ಮಹಡಿಯಲ್ಲಿ ಜರಗಿದೆ. ಬಾಲಕನಿಗೆ ಬಂದೂಕಿನಲ್ಲಿ ಗುಂಡಿದೆಎಂದುಗೊತ್ತಿರಲಿಲ್ಲ. ಆತ ತಮ್ಮನ ತಲೆಗೆ ಗುಂಡುಹೊಡೆದಿದ್ದಾನೆ.

ಗಂಭೀರಗಾಯಗೊಂಡಿದ್ದ ಮಗುವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ತಲುಪಿಸಿದರೂ ಬದುಕಿ ಉಳಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವಿನ ಮರಣಕ್ಕೆ ಪ್ರೇರಣೆ ಆರೋಪ ಹೊರಿಸಿ 26 ವಯಸ್ಸಿನ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಯುಧ ವಶದಲ್ಲಿರಿಸಿಕೊಳ್ಳುವ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಕೇಸು ದಾಖಲಿಸಲಾಗಿದೆ. ಕಳೆದ ತಿಂಗಳು ಅಜ್ಜಿಯ ದಿಂಬಿನ ಅಡಿಯಿಂದ ಕೋವಿ ತೆಗೆದು ಆಡುತ್ತಿದ್ದ ಐದು ವರ್ಷದ ಹೆಣ್ಣು ಮಗು ಮೃತವಾಗಿತ್ತು. ಇನ್ನೊಂದು ಘಟನೆಯಲ್ಲಿ ತಂದೆಯ ಕೋವಿ ತೆಗೆದು ಆಡುತ್ತಿದ್ದ ಮಗುವೊಂದು ಗುಂಡು ತಾಗಿ ಮೃತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News