×
Ad

ಎಎಪಿ ಶಾಸಕನಿಗೆ ಜಾಮೀನಿಲ್ಲ

Update: 2016-06-27 19:18 IST

ಹೊಸದಿಲ್ಲಿ, ಜೂ.27: ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಎಎಪಿ ಶಾಸಕ ದಿನೇಶ್ ಮೊಹಾನಿಯಾಗೆ ದಿಲ್ಲಿಯ ನ್ಯಾಯಾಲಯವೊಂದು ಜಾಮೀನು ಮಂಜೂರು ಮಾಡಲು ನಿರಾಕರಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.

ಕರ್ತವ್ಯ ದಂಡಾಧಿಕಾರಿಯ ಜೂ.25ರ ಆದೇಶದಲ್ಲಿ ಮಧ್ಯಪ್ರವೇಶಿಸಲು, ಕಳೆದ 2 ದಿನಗಳಲ್ಲಿ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲವೆಂದು ನಗರ ನ್ಯಾಯಾಧೀಶೆ ಭಾವನಾ ಕಲಿಯಾ ಹೇಳಿದ್ದಾರೆ.

ಶನಿವಾರ ಕರ್ತವ್ಯ ದಂಡಾಧಿಕಾರಿ, ಮೊಹಾನಿಯಾಗೆ ಜಾಮೀನು ತಿರಸ್ಕರಿಸಿ, 2 ದಿನಗಳ ಕಾಲ ತಿಹಾರ್ ಜೈಲಿಗೆ ಕಳುಹಿಸಿದ್ದರು.

ಜಾಮೀನು ನೀಡಿದ್ದಲ್ಲಿ ಮೊಹಾನಿಯಾ ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಇದರಿಂದ ಇತರ ಆರೋಪಿಗಳ ವಿರುದ್ಧ ಇನ್ನೂ ನಡೆಯುತ್ತಿರುವ ತನಿಖೆಗೆ ತೊಂದರೆಯಾಗಬಹುದೆಂದು ಪೊಲೀಸರು ಮನವಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News