ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಆಭರಣ ಕಳವು
ಹೊಸದಿಲ್ಲಿ,ಜೂ. 27: ಮಹಿಳಾ ಪ್ರಯಾಣಿಕರೊರ್ವಳ ಸರಕಿನಿಂದ ಅಮೂಲ್ಯ ವಸ್ತುಗಳನ್ನು ಕಳವು ಮಾಡಿದ್ದ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಬ್ಬರು ಗ್ರೌಂಡ್ ಸಿಬ್ಬಂದಿಯನ್ನು ಸಿಸಿಟಿವಿ ದೃಶ್ಯಗಳ ಸಹಾಯದಿಂದ ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಅವರು ಏರ್ ಇಂಡಿಯಾ ಸ್ಯಾಟ್ ಗ್ರೌಂಡ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಆರೋಪಿಗಳು ಅಮಿತ್ ಕುಮಾರ್ ಮತ್ತು ರೋಹಿತ್ ಕುಮಾರ್ ಎಂದು ಗುರುತಿಸಲಾಗಿದ್ದು ,ಅವರು ವಿಮಾನ ನಿಲ್ದಾಣದಲ್ಲಿ ಕಾರ್ಗೋ ವಿಭಾಗದ ಲೋಡರ್ ರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಪ್ರಯಾಣಿಕರ ಚಿನ್ನಾಭರಣಗಳು ಇನ್ನಿತರ ಅಮೂಲ್ಯ ವಸ್ತುಗಳನ್ನು ಕಾರ್ಗೋ ವಿಭಾಗದಲ್ಲಿ ಸರಕುಗಳನ್ನು ತುಂಬಿಸುವ ಮತ್ತು ಇಳಿಸುವ ವೇಳೆ ಈ ಕೃತ್ಯಗಳನ್ನು ನಡೆಸುತ್ತಿದ್ದರು ಎನ್ನಲಾಗಿದೆ .
ಈ ತಿಂಗಳ ಆರಂಭದಲ್ಲಿ ,ದುಬೈಯಿಂದ ಹೊಸದಿಲ್ಲಿಗೆ ವಿಮಾನದಲ್ಲಿ ಪ್ರಯಾಣಸುತ್ತಿದ್ದ ಮಹಿಳಾ ಪ್ರಯಾಣಿಕೆಯ ಸರಕುಗಳು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆದ ನಂತರ ಆಕೆಯ ಬ್ಯಾಗ್ ನಲ್ಲಿದ್ದ ಚಿನ್ನಭರಣ ಕಳವು ವಾಗಿತ್ತು. ಈ ಬಗ್ಗೆ ಆಕೆ ಪೊಲೀಸ್ ದೂರು ದಾಖಲಿಸಿದ್ದರು. ತನಿಖೆಯನ್ನು ತೀವ್ರ ಗೊಳಿಸಿದ ಪೊಲೀಸರು ,ವಿಮಾನದ ಸರಕಿನ ಸಂಗ್ರಹಾಲಯದಲ್ಲಿ ಇಬ್ಬರು ಗ್ರೌಂಡ್ ಸಿಬ್ಬಂದಿಗಳು ಕಳವು ನಡೆಸುವುದನ್ನು ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಗಳ ಸಹಾಯದಿಂದ ಪೊಲೀಸರು ಪತ್ತೆಹಚ್ಚಿ ಇಬ್ಬರು ಸಿಬ್ಬಂದಿಯನ್ನ ಬಂಧಿಸುವ ಮೂಲಕ ಪ್ರಕರಣವನ್ನು ಬೇಧಿಸುವವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳು (ಸಿಬ್ಬಂದಿಗಳು ) ಪ್ರಯಾಣಿಕರ ಸರಕುಗಳನ್ನು ಆನ್ ಲೋಡ್ ಮಾಡುವ ವೇಳೆ ವಸ್ತು ಗಳನ್ನು ಪರಿಶೀಲನೆ ನಡೆಸಿ ,ಓರ್ವ ಆರೋಪಿಯೂ ಪ್ರಯಾಣಿಕನ ಸರಕನ್ನು ಕಟರಿನ ಮೂಲಕ ಚಿನ್ನಾಭರಣಗಳನ್ನು ದೋಚುದನ್ನು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಈ ಹಿಂದೆಯೂ ಕಳವು ನಡೆಸಿದ್ದೇವೆ ಎಂದು ಆರೋಪಿಗಳು ಪೊಲೀಸರ ತನಿಖೆ ವೇಳೆ ಬಹಿರಂಗಪಡಿಸಿದ್ದಾರೆ.