ಬಹ್ರೈನ್: ಕಾಣೆಯಾದ ಬಾಲಕ ಕಾರಿನ ಢಿಕ್ಕಿಯಲ್ಲಿ ಶವವಾಗಿ ಪತ್ತೆ

Update: 2016-06-29 12:14 GMT

  ಮನಾಮ, ಜೂನ್ 29: ರವಿವಾರದಂದು ಕಾಣೆಯಾಗಿದ್ದ ಈಜಿಪ್ಟ್ ವ್ಯಕ್ತಿಯ ಮೂರುವರ್ಷದ ಮಗು ಮೃತನಾದ ಸ್ಥಿತಿಯಲ್ಲಿ ಕಾರಿನ ಢಿಕ್ಕಿಯಲ್ಲಿ ಪತ್ತೆಯಾಗಿದ್ದಾನೆ. ಹಿದ್ದ್ ಎಂಬಲ್ಲಿ ಈ ಘಟನೆ ನಡೆದಿದ್ದು ನಿನ್ನೆ ಮನೆಯಿಂದ ಹೊರಗೆ ಗೆಳೆಯರ ಜೊತೆ ಆಡುತ್ತಿದ್ದ ಮಗು ಫೈರೋಝ್ ಮುಹಮ್ಮದ್ ಅಹ್ಮದ್ ನಿನ್ನೆ ನಾಪತ್ತೆಯಾಗಿದ್ದ. ಮನೆಮಂದಿ ಎಷ್ಟೇ ಹುಡುಕಾಡಿದರೂ ಆತ ಪತ್ತೆಯಾಗಿರಲಿಲ್ಲ. ಆನಂತರ ಅವರು ಪೊಲೀಸರಿಗೆ ದೂರುನೀಡಿದ್ದಾರೆ.

  ನಿನ್ನೆ ಬೆಳಗ್ಗೆ ಇಲ್ಲಿನ ಫಾರ್ಮಸಿಯೊಂದರ ಉದ್ಯೋಗಿ ಹಿದ್ದ್ ಕ್ಲಬ್‌ನ ಪಾರ್ಕಿಂಗ್ ಏರಿಯದಲ್ಲಿ ನಿಲ್ಲಿಸಿದ್ದ ಕಾರಿನ ಹಿಂಭಾಗದಿಂದ ವಾಸನೆ ಬರುತ್ತಿದೆ ದೂರುನೀಡಿದ್ದರಿಂದ ಕಾರಿನ ಢಿಕ್ಕಿ ತೆರೆಯಲಾಯಿತು. ಅದರಲ್ಲಿ ಮಗುವಿನ ಮೃತದೇಹ ಕಂಡು ಬಂದಿತ್ತು. ಮಗುವಿನ ಮನೆ ಸಮೀಪವೇ ಈ ಪಾರ್ಕಿಂಗ್ ಸ್ಥಳವಿದೆ.ಪೊಲೀಸರು ತನಿಖೆ ಆರಂಭಿಸಿದ್ದು ಆಟವಾಡುತ್ತಾ ಮಗು ಕಾರಿನ ಢಿಕ್ಕಿ ತೆರೆದು ಒಳಹೋಗಿ ತೆರೆದು ಹೊರಬರಲು ಸಾಧ್ಯವಾಗದೆ ಒಳಗೆ ಸಿಲುಕಿಕೊಂಡು ಸಾವನ್ನಪ್ಪಿರಬೇಕು ಎಂದು ತಿಳಿಯಲಾಗಿದೆ.

   ಮೃತ ಬಾಲಕ, ಬಹ್ರೈನ್‌ನ ಇನ್ಶೂರೆನ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮುಹಮ್ಮದ್ ಅಹ್ಮದ್‌ರ ಪುತ್ರನಾಗಿದ್ದಾನೆ. ಮಗು ತೀರಿಕೊಂಡಿದೆ ಎಂಬ ಸುದ್ದಿ ತಿಳಿದು ಜನರು ಆಘಾತ ವ್ಯಕ್ತಪಡಿಸಿದ್ದಾರೆ. ನಿನ್ನೆ ಚೈಲ್ಡ್ ಮಿಸ್ಸಿಂಗ್ ಹಿದ್ದ್ ಎಂಬ ಹೆಸರಿನಲ್ಲಿ ಒಂದು ಹ್ಯಾಶ್ ಟ್ಯಾಗ್ ಅಭಿಯಾನವೇ ಸೋಶಿಯಲ್ ಮೀಡಿಯದಲ್ಲಿ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News