×
Ad

ಇಯು ಜನಮತಗಣನೆ ಪ್ರಸ್ತಾಪವನ್ನು ತಿರಸ್ಕರಿಸಿದ ಡಚ್ ಪಾರ್ಲಿಮೆಂಟ್

Update: 2016-06-29 19:48 IST

ದ ಹೇಗ್, ಜೂ. 29: ನೆದರ್‌ಲ್ಯಾಂಡ್‌ನ ಐರೋಪ್ಯ ಒಕ್ಕೂಟ (ಇಯು) ಸದಸ್ಯತ್ವದ ಬಗ್ಗೆ ಜನಮತಗಣನೆ ನಡೆಯಬೇಕು ಎಂದು ಕೋರಿ ಪ್ರತಿಪಕ್ಷ ನಾಯಕ ಗೀರ್ಟ್ ವೈಲ್ಡರ್ಸ್ ಮಂಡಿಸಿದ ನಿರ್ಣಯವನ್ನು ನೆದರ್‌ಲ್ಯಾಂಡ್ ಸಂಸತ್ತು ಬಹುಮತದಿಂದ ತಿರಸ್ಕರಿಸಿದೆ.

‘‘ಇದನ್ನು ನಾನು ಎಲ್ಲರಿಗೂ ಹೇಳುತ್ತಿದ್ದೇನೆ: ನೆದರ್‌ಲ್ಯಾಂಡ್‌ನಲ್ಲೂ ಜನಮತಗಣನೆ ನಡೆಯಬೇಕು’’ ಎಂದು ದ ಹೇಗ್‌ನಲ್ಲಿರುವ ಸಂಸತ್ತಿನಲ್ಲಿ ಮಂಗಳವಾರ ನಿರ್ಣಯವನ್ನು ಮಂಡಿಸಿದ ವೈಲ್ಡರ್ಸ್ ತಿಳಿಸಿದರು.

 ‘‘ಐರೋಪ್ಯ ಒಕ್ಕೂಟದಿಂದ ನೆದರ್‌ಲ್ಯಾಂಡ್ ಹೊರಹೋಗುವ ಅಥವಾ ಉಳಿಯುವ ಪರವಾಗಿ ಹಾಗೂ ನಮ್ಮ ರಾಷ್ಟ್ರೀಯ ಸಾರ್ವಭೌಮತೆ ಮತ್ತು ಸ್ವಾತಂತ್ರವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಜನರು ತಮ್ಮ ತೀರ್ಪು ನೀಡಲು ಸಾಧ್ಯವಾಗುವಂತೆ ನೆದರ್‌ಲ್ಯಾಂಡ್‌ನಲ್ಲೂ ಜನಮತಗಣನೆ ನಡೆಯಬೇಕು ಎಂದು ಪಾರ್ಟಿ ಫಾರ್ ಫ್ರೀಡಂನ ನಾಯಕ ಗೀರ್ಟ್ ತಿಳಿಸಿದರು.

150 ಸಂಸದರ ಪೈಕಿ ಕೇವಲ 14 ಮಂದಿ ನಿರ್ಣಯದ ಪರವಾಗಿ ಮತ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News