ಎಚ್ಚರ! ನಿಮ್ಮ ಮೆದುಳಿನ ಲಯ ತಪ್ಪಿಸಲಿದೆ ಸ್ಮಾರ್ಟ್‌ಫೋನ್

Update: 2016-06-29 18:23 GMT

ಲಂಡನ್: ಒಂದು ಹೊಸ ಅಧ್ಯಯನವು ಹೇಳಿರುವ ಪ್ರಕಾರ ಪಠ್ಯ (ಟೆಕ್ಸ್ ್ಟ) ಸಂದೇಶಗಳನ್ನು ಸ್ಮಾರ್ಟ್ ಫೋನ್ ಅಥವಾ ಐಪ್ಯಾಡ್ ನಲ್ಲಿ ಕಳುಹಿಸುವುದರಿಂದ ಮಾನವನ ಮೆದುಳಿನ ತರಂಗಗಳ ಲಯ ತಪ್ಪಲಿದೆ.

ತಂತ್ರಜ್ಞಾನದ ಅತಿಯಾದ ಬಳಕೆಯ ಬಗ್ಗೆ ಸಾರ್ವಜನಿಕ ಆರೋಗ್ಯ ಕಾಳಜಿ ಹೆಚ್ಚಾಗುತ್ತಿರುವ ಹೊರತಾಗಿಯೂ ಜನರು ಪಠ್ಯ ಸಂದೇಶಗಳ ಮೂಲಕ ಜನರು ಹೆಚ್ಚಾಗಿ ಮಾತನಾಡುತ್ತಾರೆ. ಹಾಗಿದ್ದರೂ ಸ್ಮಾರ್ಟ್ ಫೋನ್ ಬಳಸುವುದರಿಂದ ಆಗುವ ನರವ್ಯೆಹದ ಪರಿಣಾಮಗಳ ಬಗ್ಗೆ ಅತೀ ಕಡಿಮೆ ಮಾಹಿತಿ ಇದೆ.

ಸ್ಮಾರ್ಟ್‌ಫೋನ್‌ಗಳು ನಿತ್ಯದ ಚಟುವಟಿಕೆಗಳ ಕೇಂದ್ರವಾಗುತ್ತಿರುವಾಗ ಮೆದುಳು ಮತ್ತು ಕಂಪ್ಯೂಟರ್ ನಡುವಿನ ಸಂವಹನ, ಗೇಮಿಂಗ್ ಮತ್ತು ಡ್ರೈವಿಂಗ್ ಮೊದಲಾದವುಗಳಿಂದ ಆಗಬಹುದಾದ ಪರಿಣಾಮಗಳನ್ನು  ಅಧ್ಯಯನವು ಬಹಿರಂಗಪಡಿಸಿದೆ. ಸ್ಮಾರ್ಟ್ ಫೋನುಗಳನ್ನು ಬಳಸಿ ನಡೆಸುವ ಪಠ್ಯ ಸಂಪರ್ಕದ ಸಂದರ್ಭದಲ್ಲಿ ಮೆದುಳು ಹೇಗೆ ಕೆಲಸ ಮಾಡುತ್ತವೆ ಎನ್ನುವುದನ್ನು ತಿಳಿದುಕೊಳ್ಳಲು ಮೇಯೋ ಕ್ಲಿನ್ ಸಂಶೋಧಕ ವಿಲಿಯಂ ಟಾಟಂ ಅವರ ತಂಡವು 129 ರೋಗಿಗಳನ್ನು ವಿಶ್ಲೇಷಿಸಿದೆ. ಅವರ ಮೆದುಳಿನ ತರಂಗಗಳನ್ನು 16 ತಿಂಗಳ ಕಾಲ ಇಲೆಕ್ಟ್ರೋಎನ್ಸೆಫಾಲಾಗ್ರಾಂ ಅಥವಾ ಇಇಜಿ ಮೂಲಕ ವೀಡಿಯೋ ದೃಶ್ಯವನ್ನು ಇಟ್ಟುಕೊಂಡು ಅಧ್ಯಯನ ಮಾಡಲಾಗಿದೆ. ಹೀಗೆ ಸ್ಮಾರ್ಟ್ ಫೋನ್ ಬಳಸಿ ಸಂದೇಶ ಕಳುಹಿಸುವ ಐವರು ರೋಗಿಗಳಲ್ಲಿ ಒಬ್ಬನ ಮೆದುಳಿನ ತರಂಗಗಳನ್ನು ಮೇಲ್ವಿಚಾರಣೆ ನಡೆಸಿದಾಗ ವಿಶಿಷ್ಟ ಪಠ್ಯದ ಲಯವು ಕಂಡುಬಂದಿದೆ. ಈ ಹೊಸ ಲಯವು ಇಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವಾಗ ಸಂದೇಶಗಳ ಮಾಹಿತಿಯನ್ನು ಸಿದ್ಧಪಡಿಸುವ ಮೆದುಳಿನ ಸಾಮರ್ಥ್ಯವನ್ನು ಈ ಲಯ ತೋರಿಸಿದೆ. ಗಮನ ಅಥವಾ ಭಾವನೆಯು ಸೇರಿಕೊಂಡಿರುವ ವ್ಯಾಪಕವಾದ ಜಾಲವೊಂದಕ್ಕೆ ಇದು ತೀವ್ರವಾಗಿ ಸಂಬಂಧ ಹೊಂದಿದೆ ಎಂದು ಟಾಟಂ ಹೇಳಿದ್ದಾರೆ.

ರೋಗಿಗಳಿಗೆ ಪಠ್ಯ ಸಂದೇಶ ಕಳುಹಿಸುವುದು, ಬೆರಳಲ್ಲಿ ಬಡಿಯುವುದು ಮತ್ತು ಆಡಿಯೋ ಸೆಲ್ಯುಲರ್ ಟೆಲಿಫೋನ್ ಬಳಸುವುದು ಮೊದಲಾದವನ್ನು ಮಾಡಲು ಹೇಳಿದ ಸಂಶೋಧಕರು ಗಮನ ಮತ್ತು ನಡವಳಿಕೆ ಕಾರ್ಯಗಳನ್ನು ಪರಿಶೀಲಿಸಿದ್ದಾರೆ. ಆದರೆ ಕೇವಲ ಪಠ್ಯ ಸಂದೇಶಗಳು ಮಾತ್ರ ಹೊಸದಾಗಿ ಗಮನಿಸಿದ ಮೆದುಳಿನ ಲಯವನ್ನು ತೋರಿಸಿದೆ. ಇದು ಈ ಹಿಂದೆ ವಿವರಿಸಿದ ಮೆದುಳಿನ ಲಯಕ್ಕೆ ಭಿನ್ನವಾಗಿದೆ. ಪಠ್ಯ ಸಂದೇಶದ ಲಯವನ್ನು ಇತರ ರೂಪದ ಮಾನಸಿಕ ಪ್ರಚೋದನೆಗಳಿಗೆ ಹೋಲಿಸಲಾಗಿದೆ. ಐಪಾಡ್ ಬಳಸುವವರಲ್ಲೂ ಈ ಪಠ್ಯದ ಲಯವನ್ನು ಕಾಣಲಾಗಿದೆ. ವಿಭಿನ್ನ ಮೆದುಳಿನ ತರಂಗದ ಲಯವು ಮೊಬೈಲ್ ಬಳಸುವಾಗ ಕಂಡು ಬರಲು ಮುಖ್ಯ ಕಾರಣ ಅವುಗಳ ಸಣ್ಣ ಸ್ಕ್ರೀನುಗಳಾಗಿವೆ. ಅವುಗಳ ಮೇಲೆ ಹೆಚ್ಚಿನ ಗಮನದ ಅಗತ್ಯವಿದ್ದ ಕಾರಣ ಹೀಗಾಗಬಹುದು ಎನ್ನಲಾಗಿದೆ. ಪಠ್ಯ ಸಂದೇಶ ಕಳುಹಿಸುತ್ತಾ ವಾಹನ ಚಾಲನೆ ಮಾಡಬಾರದು ಎನ್ನುವುದಕ್ಕೆ ಈಗ ಜೈವಿಕ ಕಾರಣವೂ ಇದೆ. ಪಠ್ಯ ಸಂದೇಶ ಕಳುಹಿಸುವಾಗ ಮೆದುಳಿನ ತರಂಗಗಳು ಬದಲಾಗುತ್ತವೆ ಎಂದು ಟಾಟಂ ಹೇಳಿದ್ದಾರೆ.

ಕೃಪೆ: http://zeenews.india.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News