ಕಾಶ್ಮೀರ ವಿಷಯ ಬರುವಾಗ ಭಾರತ ತಪ್ಪಿಸಿಕೊಳ್ಳುತ್ತಿದೆ: ಸರ್ತಾಜ್ ಅಝೀಝ್
Update: 2016-06-30 10:57 IST
ಇಸ್ಲಾಮಾಬಾದ್, ಜೂನ್ 30: ಪಾಕಿಸ್ತಾನದೊಂದಿಗಿನ ಶಾಂತಿ ಮಾತುಕತೆಯ ವೇಳೆ ಕಾಶ್ಮೀರ ಸಮಸ್ಯೆ ಬರುವಾಗ ಭಾರತ ತಪ್ಪಿಸಿಕೊಳ್ಳುತ್ತಿದೆ ಎಂದು ಪಾಕ್ ಪ್ರಧಾನಿಯ ವಿದೇಶಕಾರ್ಯ ಸಲಹೆಗಾರ ಸರ್ತಾಜ್ ಅಝೀಝ್ ವಾದಿಸಿದ್ದಾರೆ. ಆದರೆ ಪಾಕಿಸ್ತಾನ ಚರ್ಚೆಯಿಂದ ದೂರವುಳಿಯುವ ನಿಲುವನ್ನು ತೋರಿಸಿಲ್ಲ ಎಂದು ಅವರು ಹೇಳಿದ್ದಾರೆ.
ಕಾಶ್ಮೀರ ಮತ್ತು ಇತರ ಸಮಸ್ಯೆಗಳು ಚರ್ಚಾ ವೇದಿಕೆಗೆ ಬರಬೇಕಾಗಿದೆ. ಆದರೆ ಭಾರತ ದೂರವುಳಿಯುತ್ತಿದೆ ಒಂದು ಟಿವಿ ಸಂದರ್ಶನವೊಂದರಲ್ಲಿ ಅವರು ನರೇಂದ್ರಮೋದಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಮೋದಿಯ ಸಮರ್ಥನೆಗಳು ಅರಿವಿಗಿಂತ ಆಚೆಗಿನದು ಎಂದು ಅಭಿಪ್ರಾಯವ್ಯಕ್ತಪಡಿಸಿದ ಅವರು ಭಾರತದೊಂದಿಗಿನ ಚರ್ಚೆಯಲ್ಲಿ ಪ್ರತಿಯೊಂದೂ ವಿಷಯವನ್ನು ಪಾಕಿಸ್ತಾನ ಬೇರೆ ಬೇರೆಯಾಗಿಯೇ ಪರಿಗಣಿಸಿದೆ.ಜನರ ಪರಸ್ಪರ ಸಂಬಂಧ, ವೀಸಾ, ಮೀನುಗಾರರ ವಿಷಯ,ವ್ಯಾಪಾರ ಮತ್ತು ಆರ್ಥಿಕ ಸಹಕಾರ. ಕಾಶ್ಮೀರ. ಸಿಯಾಚಿನ್ ಸರ್ಕಿಕ್ ಇವೆಲ್ಲವೂ ಇದರಲ್ಲಿ ಸೇರಿವೆ ಎಂದು ಸರ್ತಾಜ್ ಅಝೀರ್ ಹೇಳಿದ್ದಾರೆ.