ದೋಹ: ಬಕ್ರೀದ್ ನಂತರ ಸಾರ್ವಜನಿಕ ಪ್ರವೇಶಕ್ಕೆ ತೆರೆಯಲಿರುವ ತುಮೈಮದ ಕಹ್ರಮಾ ಅವೆರ್ನಸ್ ಪಾರ್ಕ್
ದೋಹ,ಜೂನ್ 30:ಶೈಕ್ಷಣಿಕ ರಂಗವು ಭವಿಷ್ಯದಲ್ಲಿ ಫಲಪ್ರದವಾಗಲಿದೆ ಎಂದು ನಿರೀಕ್ಷಿಸಲಾಗುತ್ತಿರುವ ತುಮೈಮದ ಕಹ್ರಮಾ ಅವೆರ್ನಸ್ ಪಾರ್ಕ್ ಈ ವರ್ಷ ಬಕ್ರೀದ್ ನಂತರ ಸಾರ್ವಜನಿಕ ಪ್ರವೇಶಕ್ಕೆ ತೆರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾರ್ಕ್‌ನ ಉದ್ಘಾಟನೆಗೆ ಸಂಬಂಧಿಸಿ ಜಲ-ವಿದ್ಯುತ್ ಎಂಬುದರ ಮಿತವ್ಯಯ ಕುರಿತು ಮಕ್ಕಳಿಗೆ ಮತ್ತು ಹಿರಿಯರಿಗೆ ವಿಶೇಷ ತ್ರಿಡಿ ಚಲನಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗುವುದು. ಇದುವರೆಗೆ ಸಾರ್ವಜನಿಕರ ಪ್ರವೇಶಕ್ಕೆ ತೆರೆಯದಿದ್ದರೂ ಇಷ್ಟರಲ್ಲೇ ಸರಕಾರಕ್ಕೆ ಬಹಳ ಪುರಸ್ಕಾರಗಳು ಲಭಿಸಿವೆ. ಪಾರ್ಕ್ ವಿನ್ಯಾಸಕ್ಕೆ ಬಹಳಷ್ಟು ಪುರಸ್ಕಾರಗಳು ಸಂದಿವೆ. ಶೇ.100ರಷ್ಟು ಪರಿಸರ ಸೌಹಾರ್ದ ಪರವಾಗಿ ನಿರ್ಮಿಸಿದ್ದರಿಂದ ಕ್ಯೂ.ಎಸ್.ಎ.ಎಸ್.ಸಸ್ಟೇನೇಬಲ್ ಅವಾರ್ಡ್ ಪಾರ್ಕ್‌ನ ವಿನ್ಯಾಸಕ್ಕೆ ಲಭಿಸಿದೆ. ಪಾರ್ಕ್‌ನಲ್ಲಿ ವಿದ್ಯುತ್ ಉತ್ಪಾದನೆಗಾಗಿ ಸೋಲಾರ್ ಪ್ಯಾನಲ್‌ಗಳು ಗಾಳಿಯಂತ್ರಗಳನ್ನು ಸ್ಥಾಪಿಸಲಾಗಿದೆ. ಇದು ಪರಿಸರ ಪರ ಪಾರ್ಕ್ ಎಂಬುದನ್ನು ಬಲಪಡಿಸಿವೆ. ಕಟ್ಟಡ ನಿರ್ಮಾಣ ಕಾರ್ಯ ಮುಗಿದಿದ್ದರೂ ಉದ್ಘಾಟನೆ ಆಗಿರಲಿಲ್ಲ. 2013ರಲ್ಲಿ ಪಾರ್ಕ್ ಉದ್ಘಾಟನೆಗೊಳ್ಳಲಿದೆ ಎಂದು ಘೋಷಿಸಲಾಗಿದ್ದರೂ ಅನೇಕ ತಾಂತ್ರಿಕ ಕಾರಣಗಳಿಂದ ಅದು ಉದ್ಘಾಟನೆ ಗೊಂಡಿರಲಿಲ್ಲ.