ಆಂಧ್ರಪ್ರದೇಶದಲ್ಲಿ ರಸ್ತೆ ಅಪಘಾತ: ಒಂದೇ ಕುಟುಂಬದ 6 ಮಂದಿ ಮೃತ್ಯು
ಗುಂಟೂರು, ಜೂ 30: ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮೇದರಮಟ್ಲ ಬಳಿ ಗುರುವಾರ ಬೆಳಗ್ಗೆ ಕಾರಿಗೆ ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಮಾಚೆರ್ಲ ಮಂಗಮ್ಮ(55), ಪಿ.ಚಿನ್ನಿ ಕೃಷ್ಣ ವಾಸವಿ(3), ಪಿ.ಚಿನ್ನಿ ಕೃಷ್ಣ ಮನೋಹರ(5),ಮಾಚೆರ್ಲಾ ಶ್ರೀಕೃಷ್ಣಾ(3), ಮಾಚೆರ್ಲಾ ನಿತ್ಯ ಸಿರಿ(1), ಮತ್ತು ವಸಿಮಾಲ ನಾಗರಾಜು(30) ಎಂದು ಗುರುತಿಸಲಾಗಿದೆ.
ತಿರುಪತಿ ದೇವಸ್ಥಾನಕ್ಕೆ ತೆರಳಿ ಗುಂಟೂರಿಗೆ ಕಾರಿನಲ್ಲಿ ವಾಪಸಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ರಸ್ತೆ ಬದಿ ಕಾರು ನಿಲ್ಲಿಸಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಲಾರಿ ಢಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಕಾರಿನಲ್ಲಿದ್ದ ನಾಲ್ವರು ಮಕ್ಕಳು ಸೇರಿದಂತೆ 6 ಮಂದಿ ಸಾವನ್ನಪ್ಪಿದ್ದಾರೆ.ರಸ್ತೆ ಬದಿ ಕಾರು ನಿಲ್ಲಿಸಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಕಾರಿನಲ್ಲಿದ್ದ ನಾಲ್ವರು ಮಕ್ಕಳು ಸೇರಿದಂತೆ 6 ಮಂದಿ ಸಾವನ್ನಪ್ಪಿದ್ದಾರೆ.
ಅಪಘಾತವಾದ ಸ್ಥಳದಲ್ಲಿ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.