ಹೈದರಾಬಾದ್ : ಉಗ್ರರೆಂದು ಬಂಧಿತರಲ್ಲಿ 6 ಅಮಾಯಕರು ಬಿಡುಗಡೆ

Update: 2016-06-30 10:05 GMT

ಹೈದರಾಬಾದ್ , ಜೂ. 30: ಭಯೋತ್ಪಾದನೆಯ ಆರೋಪದ ಮೇಲೆ ಬುಧವಾರ ವಶಕ್ಕೆ ಪಡೆದಿದ್ದ 11 ಮಂದಿಯ ಪೈಕಿ 6  ಮಂದಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ  ( ಎನ್ ಐ ಎ ) ಗುರುವಾರ ಬೆಳಗ್ಗೆ ಬಿಡುಗಡೆ ಮಾಡಿದೆ. ಇಲ್ಲಿನ ಎನ್ ಐ ಎ ಕಚೇರಿಯಲ್ಲಿ ಆರು ಮಂದಿಯ ಮನೆಯವರನ್ನು ಕರೆಸಿ ಅವರನ್ನು ಬಿಡುಗಡೆ ಮಾಡಲಾಗಿದೆ. 

ಬಿಡುಗಡೆಯಾದವರನ್ನು ಸಯ್ಯದ್ ನೈಮತುಲ್ಲಾ, ಮುಝಫರ್ ಹುಸೇನ್, ಮೊಹಮ್ಮದ್ ಅತಾವುಲ್ಲಾ, ಅಲ್ ಜೀಲಾನಿ , ಅಝರ್ ಹಾಗೂ ಮೊಹಮ್ಮದ್ ಅರ್ಬಾಜ್ಹ್ ಎಂದು ಗುರುತಿಸಲಾಗಿದೆ. ಇವರು ಯಾವುದೇ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಲು ಹೊರಟವರಲ್ಲ ಎಂದು ಎನ್ ಐ ಎ ಹೇಳಿದೆ. 

ಉಳಿದ ಐದು ಮಂದಿಯನ್ನು ಇಂದು ಎನ್ ಐ ಎ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News