×
Ad

ಆಲ್ಕೊಹಾಲಿಕ್ ಪೇಯಗಳಲ್ಲಿ ಮಿಶ್ರಣಗಳಿಗೆ ಆಹಾರ ನಿಯಂತ್ರಕದಿಂದ ಹೊಸ ಮಿತಿ ಪ್ರಸ್ತಾಪ

Update: 2016-06-30 21:53 IST

ಹೊಸದಿಲ್ಲಿ, ಜೂ.29: ಆಹಾರ ಸುರಕ್ಷೆ ಹಾಗೂ ಗುಣಮಟ್ಟ ಪ್ರಾಧಿಕಾರವು ಬುಧವಾರ, ವೈನ್ ಸಹಿತ ವಿವಿಧ ಆಲ್ಕೊಹಾಲಿಕ್ ಪೇಯಗಳಿಗಾಗಿ, ವಿವಿಧ ಮಿಶ್ರಣಗಳಿಗೆ ಮಿತಿಯನ್ನು ನಿಗದಿಪಡಿಸುವ ಪ್ರಸ್ತಾಪವನ್ನು ಮುಂದಿರಿಸಿವೆ.

ಆಲ್ಕೊಹಾಲ್ ಮುಕ್ತ ಹಾಗೂ ಕಡಿಮೆ ಆಲ್ಕೊಹಾಲ್‌ನ ಪೇಯಗಳು ಸಹಿತ ಆಲ್ಕೊಹಾಲಿಕ್ ಪೇಯಗಳಲ್ಲಿ ಹೆಚ್ಚುವರಿ ಮಿಶ್ರಣಗಳು, ಎನ್‌ಸೈಮ್‌ಗಳು, ಸಂಸ್ಕರಣ ಸಹಾಯಕಗಳ ಉಪಯೋಗಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆಯನ್ನು ಪ್ರಾಧಿಕಾರವು ಪ್ರಕಟಿಸಿದ್ದು, ಸಂಬಂಧಪಟ್ಟವರಿಂದ ಸಲಹೆ, ಸೂಚನೆ, ಟೀಕೆ ಇತ್ಯಾದಿಗಳನ್ನು ಆಹ್ವಾನಿಸಿದೆಯೆಂದು ಎಫ್‌ಎಸ್‌ಎಸ್‌ಎಐಯ ಅಧಿಸೂಚನೆಯು ತಿಳಿಸಿದೆ.

ಅದು ಪಟ್ಟಿಯಲ್ಲಿ ಹೊಸ ಮಿಶ್ರಣಗಳನ್ನೂ ಸೇರಿಸಿದೆ.

ದ್ರಾಕ್ಷಿಗಳ ವೈನ್ ಹಾಗೂ ಶೇ.15ಕ್ಕಿಂತ ಹೆಚ್ಚು ಆಲ್ಕೊಹಾಲ್ ಇರುವ ಭಟ್ಟಿ ಇಳಿಸಿದ ಪಾನೀಯಗಳಲ್ಲಿ ಉಪಯೋಗಿಸಬಹುದಾದ ಮಿಶ್ರಣ ಅಥವಾ ಎನ್‌ಸ್ಟೆಮ್‌ಗಳ ಪಟ್ಟಿಯನ್ನು ಪ್ರಾಧಿಕಾರವು ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ.

ಅಂತಾರಾಷ್ಟ್ರೀಯ ದ್ರಾಕ್ಷಿ ಬಳ್ಳಿ ಹಾಗೂ ದ್ರಾಕ್ಷಾರಸ ಸಂಘಟನೆಯ(ಒಐವಿ) ಮಾನದಂಡಗಳಿಗೆ ಅನುಸಾರವಾಗಿರುವ, ಆಲ್ಕೊಹಾಲಿಕ್ ಪಾನೀಯ ಹಾಗೂ ಗುಣಮಟ್ಟಗಳಿಗೆ ಸಂಬಂಧಿಸಿದ ಆಹಾರ ಮಿಶ್ರಣಗಳು ಹಾಗೂ ಗುಣಮಟ್ಟಗಳ ಪಟ್ಟಿಯೊಂದನ್ನು ಪ್ರಾಧಿಕಾರವು ಅಂತಿಮಗೊಳಿಸಿದೆಯೆಂದು ಎಫ್‌ಎಸ್‌ಎಸ್‌ಎಐಯ ಸಿಇಒ ಪವನ್ ಅಗರ್ವಾಲ್ ಈ ಮೊದಲು ತಿಳಿಸಿದ್ದರು.

ಇದೇ ವೇಳೆ, ಪ್ರತ್ಯೇಕ ಕರಡು ಅಧಿಸೂಚನೆಯೊಂದರಲ್ಲಿ ಪ್ರಾಧಿಕಾರವು, ಇಂಗಾಲರಹಿತ ನೀರು ಆಧಾರಿತ(ನಾನ್ ಕಾರ್ಬನೇಟೆಡ್) ಪಾನೀಯಗಳ ಮಾನದಂಡಗಳ ಬಗ್ಗೆ ಸಂಬಂಧಪಟ್ಟವರಿಂದ ಸಲಹೆಗಳನ್ನು ಆಹ್ವಾನಿಸಿದೆ.

ಈ ಇಂಗಾಲೇತರ ಪಾನೀಯಗಳಲ್ಲಿ ಸಕ್ಕರೆ, ದ್ರವ ಗ್ಲೂಕೋಸ್, ಫ್ರುಕ್ಟೋಸ್, ಜೇನು, ಹಣ್ಣು ಮತ್ತು ತರಕಾರಿಗಳ ಸಾರ ಮತ್ತಿತರ ವಸ್ತುಗಳು ನೀರಿನೊಂದಿಗಿರಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News