×
Ad

ಜುಲೈ 25ರಿಂದ ಪ್ರವಾಸಿಗರಿಗೆ ಮುಕ್ತ

Update: 2016-07-01 00:06 IST

ಹೊಸದಿಲ್ಲಿ, ಜೂ.30: ರಾಷ್ಟ್ರಪತಿ ಭವನದ ಮೂರು ತಾಣಗಳು ಜುಲೈ 25ರಿಂದ ಸಾರ್ವಜನಿಕರ ಸಂದರ್ಶನಕ್ಕೆ ಮುಕ್ತವಾಗಲಿದೆ.

  ರಾಷ್ಟ್ರಪತಿ ಭವನದಲ್ಲಿ ಅಭಿವೃದ್ಧಿಪಡಿಸಲಾಗುವ ಮೂರು ನೂತನ ಪ್ರವಾಸಿ ಸರ್ಕಿಟ್‌ಗಳಿಗೆ ಪ್ರಚಾರ ನೀಡುವ ಸಲುವಾಗಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಕಾರ್ಯದರ್ಶಿ ಒಮಿತಾ ಪೌಲ್ ಗುರುವಾರ 24 ಮಂದಿ ಪ್ರಮುಖ ಪ್ರವಾಸಿ ನಿರ್ವಾಹಕರ ಜೊತೆ ಮಾತುಕತೆ ನಡೆಸಿದರು.
‘‘ರಾಷ್ಟ್ರಪತಿ ಭವನದ ಮುಖ್ಯ ಕಟ್ಟಡ, ಮ್ಯೂಸಿಯಂಗಳು ಹಾಗೂ ಉದ್ಯಾನವನಗಳನ್ನು ಪ್ರವಾಸಿಗರು ಒಂದೊಂದಾಗಿ ಇಲ್ಲವೇ ಸಂಯೋಜಿತವಾಗಿ ವೀಕ್ಷಿಸಬಹುದಾಗಿದೆ’’ ಎಂದು ರಾಷ್ಟ್ರಪತಿ ಭವನದ ಕಚೇರಿಯು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ. ಈ ಮೂರು ಪ್ರವಾಸಿ ಸರ್ಕಿಟ್‌ಗಳು ಜುಲೈ 25ರಂದು ಉದ್ಘಾಟನೆಗೊಳ್ಳಲಿವೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News