ಐಎಎಸ್ ಅಧಿಕಾರಿಗಳಂತೆ ನಮಗೂ ವೇತನ ನೀಡಿ
ಹೊಸದಿಲ್ಲಿ , ಜೂ.30 : ಏಳನೆ ವೇತನ ಆಯೋಗದ ಶಿಫಾರಸಿಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಭಾರತೀಯ ಪೊಲೀಸ್ ಸೇವೆ ಸೇರಿದಂತೆ ಒಟ್ಟು 20 ನಾಗರಿಕ ಸೇವೆಯ ಸಾವಿರಾರು ಪ್ರತಿನಿಧಿಗಳ ಒಕ್ಕೂಟವು ಇದೀಗ ಟೊಂಕ ಕಟ್ಟಿದೆ. ಐಎಎಸ್ ಅಧಿಕಾರಿಗಳಿಗೆ ಇರುವ ಉದ್ಯೋಗ ಸಂಬಂಧಿ ಅವಕಾಶಗಳು ಹಾಗೂ ಸಮಾನ ವೇತನವನ್ನು ತಮಗೂ ನೀಡಬೇಕೆಂದು ಒಕ್ಕೂಟವು ಸರಕಾರವನ್ನು ಒತ್ತಾಯಿಸಿದೆ. ವೇತನ ಆಯೋಗದ ಮೂವರು ಸದಸ್ಯರಲ್ಲಿ ಇಬ್ಬರು ಸದಸ್ಯರ ಶಿಫಾರಸ್ಸಿಗೆ ಸರಕಾರ ಒಪ್ಪಿಗೆ ಸೂಚಿಸಿರುವುದರಿಂದ, ಇತರ ನಾಗರಿಕ ಸೇವೆಗಳ ಅಧಿಕಾರಿಗಳಲ್ಲಿಯೂ ಸಮಾನ ವೇತನದ ಬಲವಾದ ಆಸೆಯನ್ನು ಹುಟ್ಟಿಸಿದೆ.
‘‘ವೇತನ ಮತ್ತು ಸೇವೆಯ ಸಮಾನತೆಯ ಕುರಿತಾದ ಬಹುತೇಕ ಶಿಫಾರಸುಗಳನ್ನು ಸರಕಾರ ಶೀಘ್ರವೇ ಅನುಷ್ಠಾನ ಮಾಡಬೇಕೆಂದು ತಾವು ಮನವಿ ಮಾಡುತ್ತಿದ್ದೇವೆ ’’ ಎಂದು ನಾಗರಿಕ ಸೇವೆ ಅಧಿಕಾರಿಗಳ ಒಕ್ಕೂಟದ ಸಂಚಾಲಕ ಜಯಂತ್ ಮಿಶ್ರಾ ಹೇಳಿದ್ದಾರೆ.ಪಿಎಸ್, ಭಾರತೀಯ ಕಂದಾಯ ಸೇವೆ ,ಭಾರತೀಯ ಅರಣ್ಯ ಸೇವೆ ,ಭಾರತೀಯ ಲೆಕ್ಕ ಪರಿಶೋಧನೆ ಸೇವೆ ಹಾಗೂ 9 ರೈಲ್ವೆ ಅಧಿಕಾರಿಗಳ ಒಕ್ಕೂಟಗಳನ್ನು ನಾಗರಿಕ ಸೇವೆ ಪ್ರತಿನಿಧಿಗಳ ಒಕ್ಕೂಟವು ಒಳಗೊಂಡಿದೆ.