×
Ad

ಛತ್ತೀಸ್‌ಗಡದ ಬಿಜೆಪಿ ನಾಯಕನ ಪುತ್ರನಿಗೆ 11 ವರ್ಷದ ಬಾಲಕಿ ಜೊತೆ ವಿವಾಹ!

Update: 2016-07-01 10:52 IST

 ರಾಂಚಿ,ಜುಲೈ 1: ಛತ್ತೀಸ್‌ಗಡದ ಬಿಜೆಪಿ ನಾಯಕ ತಾಲಾ ಮರಾಂಡಿಯ ಪುತ್ರ ಮುನ್ನಾಗೆ ಹನ್ನೊಂದು ವರ್ಷದ ಬಾಲಕಿಯನ್ನುವಿವಾಹ ಮಾಡಿಸಿದ ಘಟನೆ ವರದಿಯಾಗಿದೆ. ಝಾರ್ಖಂಡ್‌ನ ಗೋಡ್ಡಾ ಜಾತಿಗೆ ಸೇರಿದ ಬಾಲಕಿಯನ್ನು ಜೂನ್ 27ಕ್ಕೆ ಈತ ಮದುವೆ ಆಗಿದ್ದಾನೆ. ಮದುವೆಯ ಸತ್ಕಾರ ಪಾರ್ಟಿಯಲ್ಲಿ ಭಾಗವಹಿಸಲು ಛತ್ತೀಸ್‌ಗಡ ಮುಖ್ಯಮಂತ್ರಿ ರಘುಬರ್ ಧಾರ್ ನಿರ್ಧರಿಸಿದ್ದರು. ಆದರೆ ಕೊನೆಕ್ಷಣದಲ್ಲಿ ಘಟನೆ ವಿವಾದವಾದ ನಂತರ ಸತ್ಕಾರಕೂಟದಲ್ಲಿ ಪಾಲ್ಗೊಳ್ಳಲಿರುವ ತನ್ನ ಕಾರ್ಯಕ್ರಮವನ್ನು ರದ್ದುಪಡಿಸಿದ್ದರು. ಬಿಜೆಪಿ ನಾಯಕ ತಾಲಾ ಮರಾಂಡಿ ತನ್ನ ಮಗ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನುವರಿಸಿದ್ದ ಬಗ್ಗೆ ಯಾವ ಪ್ರತಿಕ್ರಿಯೆಗೂ ಸಿಕ್ಕಿಲ್ಲ.

  ಈ ಮೊದಲು ಮುನ್ನಾನ ವಿರುದ್ಧ ಪರಿಶಿಷ್ಟಜಾತಿಯ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಎರಡು ವರ್ಷಗಳವರೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಇದೆ. ಆದ್ದರಿಂದ ಮುನ್ನಾನೊಂದಿಗೆ ನಿಶ್ಚಯವಾಗಿದ್ದಇನ್ನೊಂದು ಮದುವೆಯನ್ನು ವಧುವಿನ ಕಡೆಯವರೇ ಈತನ ವಿರುದ್ಧ ಲೈಂಗಿಕ ಆರೋಪದಿಂದಾಗಿ ಮುರಿದಿದ್ದರು. ಈ ಘಟನೆಯಲ್ಲಿ ತಾಲಾ ಮರಾಂಡಿ ರಾಜಿನಾಮೆ ನೀಡಬೇಕು ಹಾಗೂ ಈತನ ಮಗನ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕಾಂಗ್ರೆಸ್ ಪಕ್ಷ ಹಾಗೂ ಝಾರ್ಖಂಡ್‌ ವಿಕಾಸ್‌ಮೋರ್ಚಾ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News