ಕಾಶ್ಮೀರ ಬಂಗ್ಲೆಯ ಕುರಿತು ಜಂಗೀ ಕುಸ್ತಿಗಿಳಿದ ಮೆಹಬೂಬ ಮುಫ್ತಿ!

Update: 2016-07-01 05:59 GMT

ಶ್ರೀನಗರ,ಜುಲೈ 1: ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲರೊಂದಿಗೆ ಮುಖ್ಯಮಂತ್ರಿ ಮೆಹಬೂಬಮುಫ್ತಿಯ ರಾಜಕೀಯದ ಜಂಗೀ ಕುಸ್ತಿಮುಂದುವರಿದಿದೆ. ಈ ಬಾರಿ ಉಮರ್‌ಅಬ್ದುಲ್ಲರ ಮಾಜಿ ಪತ್ನಿ ಪಾಯಲ್‌ರೊಂದಿಗೆ ಮೆಹಬೂಬ ಘರ್ಷಣೆಗಿಳಿದ್ದಿದ್ದಾರೆ. ಉಮರ್ ಅಬ್ದುಲ್ಲ ಮುಖ್ಯಮಂತ್ರಿಯಾಗಿದ್ದಾಗ ದಿಲ್ಲಿಯಲ್ಲಿ ವಾಸಿಸಿದ್ದ 7 ಅಕ್ಬರ್ ರಸ್ತೆಯ ಟೈಪ್ ಎಂಟನೆ ಬಂಗ್ಲೆಯ ಕುರಿತು ಈಗ ವಿವಾದ ಸೃಷ್ಟಿಯಾಗಿದೆ. ಬಂಗ್ಲೆ ತೆರವಿಗೆ ಜಮ್ಮು-ಕಾಶ್ಮೀರ ರೆಸಿಡೆಂಟ್ ಕಮೀಶನ್ ಎಸ್ಟೇಟ್ ಆಫೀಸರ್ ನೋಟಿಸ್ ಜಾರಿಗೊಳಿಸಿದ್ದಾರೆ. ಆದರೆ ಪಾಯಲ್ ಇಝೆಡ್ ಕೆಟಗರಿ ಭದ್ರತೆಯಿರುವ ತನಗೂ ತನ್ನ ಇಬ್ಬರು ಗಂಡು ಮಕ್ಕಳಿಗೂ ಇಲ್ಲಿವಾಸಿಸಲು ಕಾನೂನಾತ್ಮಕವಾದ ಹಕ್ಕು ಇದೆಎಂದು ಪಾಯಲ್ ಅಬ್ದುಲ್ಲ ಹೇಳಿದ್ದಾರೆ. ತಾನು ಮತ್ತು ಮಕ್ಕಳು 1999ರಿಂದ ಇಲ್ಲಿವಾಸಿಸುತ್ತಾ ಬಂದಿದ್ದೇವೆ. ವಿವಾಹವಿಚ್ಛೇದಿತಳಾದ ಮಹಿಳೆಯನ್ನು ಸುಪ್ರೀಂಕೋರ್ಟ್ ತೀರ್ಪು ಪ್ರಕಾರ ಮಾಜಿ ಪತಿಗೆ ಅನುಮತಿಸಿದ ಮನೆಯಿಂದ ತೆರವುಗೊಳಿಸುವಂತಿಲ್ಲ ಎಂದು ಪಾಯಲ್ ವಾದಿಸಿದ್ದಾರೆ. ಕಾಶ್ಮೀರವನ್ನು ಭಾರತಕ್ಕೆ ಸೇರಿಸಬೇಕೆಂದು ವಾದಿಸಿದ ಶೇಖ್ ಅಬ್ದುಲ್ಲಾರ ಮರಿಮಕ್ಕಳು ತನ್ನ ಜೊತೆಗಿರುವವರಾಗಿದ್ದು ಅವರ ಭದ್ರತೆಯನ್ನು ಖಚಿತಗೊಳಿಸಬೇಕಾಗಿದೆ ಎಂದು ಪಾಯಲ್ ಪ್ರತಿಕ್ರಿಯಿಸಿದ್ದಾರೆ.

 ಭದ್ರತಾ ಕಾರಣಗಳಿಂದಾಗಿ ಪ್ರಿಯಾಂಕಾ ಗಾಂಧಿ ಮುಂತಾದವರು ಸರಕಾರಿ ಬಂಗ್ಲೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಪಾಯಲ್ ಬೆಟ್ಟುಮಾಡಿದ್ದಾರೆ. 2015 ಜನವರಿಯಲ್ಲಿ ಉಮರ್ ಅಬ್ದುಲ್ಲ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಇತ್ತಿದ್ದರು. ಉಮರ್ ಅಬ್ದುಲ್ಲ ಮುಖ್ಯಮಂತ್ರಿಯಾದ ನಂತರ ದಿಲ್ಲಿಯ ಅರಮನೆಗೆ ಸಮಾನವಾದ ಬಂಗ್ಲೆಯಲ್ಲಿ ವಾಸಿಸುತ್ತಿರುವ ಪಾಯಲ್‌ಗೆ ಕಳೆದ ವರ್ಷನವೆಂಬರ್ 30ಕ್ಕೆ ಎಸ್ಟೇಟ್ ಆಫೀಸರ್ ತೆರವು ಗೊಳಿಸುವಂತೆ ನೋಟಿಸ್ ನೀಡಿದ್ದರು. ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಗೆ ಬಂಗ್ಲೆ ನೀಡಿದ್ದರಿಂದ ಅವರಿಗೆ ನೋಟಿಸ್ ಕಳುಹಿಸಬೇಕಾಗಿದೆ ಎಂದು ಪಾಯಲ್ ಉತ್ತರ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News