ಬಿಹಾರ: ಇಫ್ತಾರ್ ಕೂಟದಲ್ಲಿ ಲಾಲೂ-ನಿತೀಶ್- ಜೀತನ್‌ರಾಮ್ ಮಾಂಝಿ ಭಾಯಿ ಭಾಯಿ
ಪಾಟ್ನಾ,ಜುಲೈ 2: ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಆಯೋಜಿಸಿದ ಇಫ್ತಾರ್‌ಕೂಟದಲ್ಲಿ ವಿರೋಧ- ಪ್ರತಿರೋಧದ ರಾಜಕೀಯ ಸ್ವಲ್ಪಮಟ್ಟಿಗೆ ಶಮನಗೊಂಡಂತೆ ಕಂಡು ಬಂದಿದೆ. ಫೆಬ್ರವರಿ 2015ರಲ್ಲಿ ಮುಖ್ಯಮಂತ್ರಿ ಪದದಿಂದ ಹೊರಬಂದ ಬಳಿಕ ಪ್ರಥಮಬಾರಿ ನಿತೀಶ್ ಕುಮಾರ್‌ರ ಬಳಿ ಕಂಡು ಬಂದಿದ್ದಾರೆ. ಇಬ್ಬರು ಹತ್ತಿರದ ಕುರ್ಚಿಗಳಲ್ಲಿ ಕೂತಿದ್ದರು. ಮತ್ತು ಅವರಿಬ್ಬರೂ ಪರಸ್ಪರ ಚರ್ಚಿಸುತ್ತಿದ್ದರು. . ವರ್ಷಗಳಿಂದ ಅವರಿಬ್ಬರ ನಡುವೆ ಇರುವ ರಾಜಕೀಯ ವಿರೋಧದಿಂದಾಗಿ ಎಲ್ಲರ ಕಣ್ಣುಗಳು ನಿತೀಶ್ ಮತ್ತು ಮಾಂಝಿಯ ಮೇಲಿದ್ದವು.
ಲಾಲೂರ ದೊಡ್ಡ ಮಗ ಹಾಗೂ ಆರೋಗ್ಯ ಸಚಿವ ತೇಜಪ್ರತಾಪ್‌ರ ಮನೆಯಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ "ಲಾಲೂಜಿ ತನ್ನಿಂದ ದೂರವಾದ ಕೆಲವು ಜನರನ್ನು ನೆನಪಿಸಿಕೊಂಡರು. ಅವರೆಲ್ಲರೂ ಇಫ್ತಾರ್ ಕೂಟಕ್ಕೆ ಬಂದಿದ್ದಾರೆ" ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ. ಇಫ್ತಾರ್‌ಗೆ ಬಂದ ಮಾಂಝಿಯವರನ್ನು ನಿತೀಶ್‌ರ ಪಕ್ಕದಲ್ಲಿ ಲಾಲೂ ಕುಳ್ಳಿರಿಸಿದ್ದರು. ನಿತೀಶ್‌ಗೆ ಲಾಲೂ ಟೋಪಿಯನ್ನು ತೊಡಿಸಿದರು. ನಿತೀಶ್‌ರನ್ನು ಭೇಟಿಯಾದ ಕುರಿತು ಪ್ರತಿಕ್ರಿಯಿಸಿದ ಮಾಂಝಿ ಇದೊಂದು ಸಾಮಾನ್ಯವಿಷಯ ಸಭೆಸಮಾರಂಭಗಳಲ್ಲಿ ನಾವಿಬ್ಬರು ಪರಸ್ಪರ ಭೇಟಿಯಾಗುತ್ತಿರುತ್ತೇವೆ ಮಾತಾಡುತ್ತಿರುತ್ತೇವೆ ಎಂದಿದ್ದಾರೆ. ಇಫ್ತಾರ್‌ಕೂಟದಲ್ಲಿ ಜೀತನ್‌ರಾಮ್ ನನ್ನ ಹಳೆಯ ಗೆಳೆಯ ಎಂದುಲಾಲುಪ್ರಸಾದ್ ಯಾದವ್ ಹೇಳಿದರೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಇಫ್ತಾರ್ ಬೇರೆ ಬೇರೆ ರೀತಿಯಲ್ಲಿ ಆಯೋಜಿಸಲಾಗುತ್ತದೆ. ಅಲ್ಲಿಒಬ್ಬರು ಇನ್ನೊಬ್ಬರು ಭೇಟಿಯಾಗುವುದು ಸಹಜ ಇದಕ್ಕೆ ವ್ಯತಿರಿಕ್ತ ಅಭಿಪ್ರಾಯ ಕಲ್ಪಿಸಬಾರದು ಎಂದು ಹೇಳಿದ್ದಾರೆ. ಅಂತೂ ಇಫ್ತಾರ್ ಕೂಟದಲ್ಲಿ ಈ ಮೂವರು ನಾಯಕರು ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.