ಐಸಿಸ್ ಎಂದು ಅರಬ್ ಉದ್ಯಮಿಯ ಮೇಲೆ ಮುಗಿಬಿದ್ದ ಅಮೆರಿಕನ್ ಪೊಲೀಸರು, ಆಘಾತದಿಂದ ಆಸ್ಪತ್ರೆಗೆ ದಾಖಲು

Update: 2016-07-03 10:29 GMT

ಒಹಿಯೊ, ಜು.3: ಅರಬಿ ಮಾತನಾಡಿದ ತಪ್ಪಿಗಾಗಿ  ಐಸಿಸ್‌ ಎಂದು ಅರಬ್‌ ಉದ್ಯಮಿಯ ಮೇಲೆ ಅಮೆರಿಕನ್‌ ಪೊಲೀಸರು ಮುಗಿ ಬಿದ್ದ ಘಟನೆ ಒಹಿಯೊದಲ್ಲಿ   ನಡೆದಿದೆ.
ಅಬುಧಾಬಿಯ ಉದ್ಯಮಿ ಅಹ್ಮದ್‌ ಅಲ್‌ ಮೆನ್ನಾಲಿ  ಎಂಬವರು ತನ್ನ ದೇಶದ ಸಾಂಪ್ರದಾಯಿಕ ಉಡುಪು

ಧರಿಸಿ ಹೋಟೆಲ್‌ನ ಹೊರಗಡೆ ನಿಂತು ಅರಬಿಯಲ್ಲಿ ಮಾತನಾಡುತ್ತಿದ್ದಾಗ ಅವರ ಮೇಲೆ ಐವರು ಅಧಿಕಾರಿಗಳು ಮುಗಿಬಿದ್ದು ಥಳಿಸಿದರೆನ್ನಲಾಗಿದೆ.
ಅರಬಿ ಮಾತನಾಡಿದ ಕಾರಣಕ್ಕಾಗಿ ಅವರನ್ನು   ಐಸಿಸ್‌ ಎಂದು ಗುಮಾನಿ ವ್ಯಕ್ತಪಡಿಸಿದ ಅಮೆರಿಕ ಪೊಲೀಸರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಏಕಾಏಕಿ ಪೊಲೀಸರ ದಾಳಿಯಿಂದ ಆಘಾತಕ್ಕೊಳಗಾಗಿರುವ 41ರ ಹರೆಯದ  ಅಹ್ಮದ್‌ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.ಸಿಎಐಆರ‍್  ನಿರ್ದೇಶಕ ಕ್ಲೆವೆಲಾಂಡ್‌ ಜೂಯ್ಲಾ ಶೆಯರ್ಸನ್‌ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.  ಪೊಲೀಸರ ದಾಳಿಯಿಂದ ಆಘಾತಗೊಂಡಿರುವ ಅಹ್ಮದ್‌ ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.
ಈ ಘಟನೆಯ ಬಳಿಕ ಯುನೈಟೆಡ್‌ ಅರಬ್‌ ಎಮಿರೆಟ್ಸ್ ನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತನ್ನದೇಶದ ಪ್ರಜೆಗಳು ಹೊರ ದೇಶಗಳಿಗೆ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಸಾಂಪ್ರದಾಯಿಕ ಉಡುಪು ಧರಿಸಿದ್ದರೆ ಈ ಬಗ್ಗೆ ಎಚ್ಚರವಹಿಸುವಂತೆ    ಸಲಹೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News