×
Ad

ಬಾಲಿವುಡ್ ನಟಿ ಶ್ರದ್ಧಾ ಕಪೂರ್‌ರನ್ನು ಭೇಟಿಯಾಗಿದ್ದ ಬಾಂಗ್ಲಾ ದಾಳಿಯ ಉಗ್ರ

Update: 2016-07-03 20:58 IST

ಢಾಕಾ, ಜು.3: ಬಾಂಗ್ಲಾದ ಢಾಕಾದ ಹೋಟೆಲ್‌ನಲ್ಲಿ ನಡೆದ ದಾಳಿ ಪ್ರಕರಣದಲ್ಲಿ ಭಾಗಿಯಾದ ಉಗ್ರರ ಪೈಕಿ ನಿಬ್ರಾಸ್ ಇಸ್ಲಾಮ್ ಎಂಬಾತ ಬಾಲಿವುಡ್ ನಟಿ ಶ್ರದ್ಧಾಕಪೂರ್‌ರನ್ನು ಭೇಟಿ ಮಾಡಿದ್ದ. ಆತನ ಫೇಸ್‌ಬುಕ್ ಪೋಸ್ಟ್ ಮೂಲಕ ಈ ವಿಚಾರ ತಿಳಿದುಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆತನ ಫೇಸ್‌ಬುಕ್ ಪೋಸ್ಟ್‌ನ ಪ್ರಕಾರ ಆತ ತನ್ನ 20ನೆ ವಯಸ್ಸಿನಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್‌ರನ್ನು ಭೇಟಿಯಾಗಿದ್ದ. ಈ ಸಂದರ್ಭ ಆಕೆಗೆ ಶೇಕ್‌ಹ್ಯಾಂಡ್ ಮಾಡಿದ ಫೋಟೊ ಮತ್ತು ವೀಡಿಯೊಗಳನ್ನು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ್ದ ಎನ್ನಲಾಗಿದೆ.

ಬಾಂಗ್ಲಾದೇಶದ ಢಾಕಾದ ಹೋಟೆಲೊಂದಕ್ಕೆ ದಾಳಿ ನಡೆಸಿದ್ದ ಉಗ್ರರು ಸುಮಾರು 20 ಮಂದಿ ವಿದೇಶೀಯರನ್ನು ಒತ್ತೆಯಾಳುಗಳನ್ನಾಗಿಟ್ಟುಕೊಂಡು ಹತ್ಯೆ ಮಾಡಿದ್ದರು. ಈ ವೇಳೆ ಕಾರ್ಯಾಚರಣೆ ನಡೆಸಿದ್ದ ಸೈನಿಕರು ಈ ನಿಬ್ರಾಸ್ ಇಸ್ಲಾಮ್ ಸಹಿತ 6 ಮಂದಿ ಉಗ್ರರನ್ನು ಕೊಂದಿದ್ದರು. ಓರ್ವನನ್ನು ಜೀವಂತವಾಗಿ ಸೆರೆಹಿಡಿಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News