×
Ad

ನಮಾಝ್‌ಗೆ ಹೋಗುತ್ತಿದ್ದ ವೈದ್ಯನ ಬರ್ಬರ ಕೊಲೆ

Update: 2016-07-03 22:08 IST

ಹೂಸ್ಟನ್,ಜು.3: ಇಲ್ಲಿನ ಮಸೀದಿಯೊಂದಕ್ಕೆ ಬೆಳಗ್ಗಿನ ನಮಾಝ್‌ಗಾಗಿ ತೆರಳುತ್ತಿದ್ದ ಮುಸ್ಲಿಂ ವೈದ್ಯರೊಬ್ಬರನ್ನು ಗುಂಡಿಕ್ಕಿ ಬಳಿಕ ಇರಿದು ಮೂವರ ತಂಡವೊಂದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರವಿವಾರ ನಡೆದಿದೆ.

ಇದನ್ನು ಮಸೀದಿಯ ವಕ್ತಾರ ಮುಹಮ್ಮದ್ ಇಮಾದುದ್ದೀನ್ ಅವರು ಖಚಿತಪಡಿಸಿದ್ದಾರೆ.

ಫ್ಲೋರಿಡಾದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನ ಮೇಲೆ ದಾಳಿ ನಡೆದ ಮರುದಿನವೇ ಈ ಘಟನೆ ನಡೆದಿದೆ. ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಗಳ ಬಳಿಕ ಅಮೆರಿಕ ಹಾಗೂ ಯುರೋಪ್‌ನ ದೇಶಗಳಲ್ಲಿ ಮುಸ್ಲಿಮರ ಮೇಲಿನ ದಾಳಿ ಘಟನೆಗಳು ಹೆಚ್ಚುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News