ಸ್ವಿಸ್ ಬ್ಯಾಂಕ್‌ಗಳಲ್ಲಿ ಠೇವಣಿ: ಭಾರತಕ್ಕೆ 75ನೇ ರ್ಯಾಂಕ್
ನ್ಯೂಯಾರ್ಕ್,ಜು.3: ಸ್ವಿಝರ್‌ಲ್ಯಾಂಡ್‌ನ ಬ್ಯಾಂಕ್‌ಗಳಲ್ಲಿ ಠೇವಣಿಯಿರಿಸಿರುವವರಲ್ಲಿ ಅಮೆರಿಕದ ನಾಗರಿಕರು ನಂ.1 ಸ್ಥಾನದಲ್ಲಿದ್ದು, ಭಾರತೀಯರು 75ನೇ ಸ್ಥಾನದಲ್ಲಿದ್ದಾರೆ.
ಕಳೆದ ವರ್ಷ ಭಾರತವು 61ನೇ ಸ್ಥಾನದಲ್ಲಿತ್ತು. 2007ರವರೆಗೆ ಸ್ವಿಸ್ ಬ್ಯಾಂಕ್‌ಗಳಲ್ಲಿ ಅತ್ಯಧಿಕ ಹಣವನ್ನು ಠೇವಣಿಯಿರಿಸಿದ ‘ಟಾಪ್ 50’ ರಾಷ್ಟ್ರಗಳ ಸಾಲಿನಲ್ಲಿತ್ತು ಹಾಗೂ 2004ರಲ್ಲಿ ಅದು 34ನೆ ರ್ಯಾಂಕ್‌ನಲ್ಲಿತ್ತು.
ಸ್ವಿಟ್ಝರ್‌ಲ್ಯಾಂಡ್‌ನ ಕೇಂದ್ರೀಯ ಬ್ಯಾಂಕ್ ಆಗಿರುವ ಎಸ್‌ಎನ್‌ಬಿ, ಇತ್ತೀಚೆಗೆ ಬಿಡುಗಡೆಗೊಳಿಸಿರುವ ಮಾಹಿತಿಯ ಪ್ರಕಾರ, 2015ರ ಅಂತ್ಯದವರೆಗೆ ವಿವಿಧ ಸ್ವಿಸ್‌ಬ್ಯಾಂಕ್‌ಗಳಲ್ಲಿ ವಿದೇಶಿ ಗ್ರಾಹಕರು ಠೇವಣಿಯಿರಿಸಿರುವ ಒಟ್ಟು ಹಣದ ಮೊತ್ತ 1.42 ಟ್ರಿಲಿಯನ್ ಸ್ವಿಸ್‌ಫ್ರಾಂಕ್‌ಗೂ (ಸುಮಾರು 98 ಲಕ್ಷ ಕೋಟಿ ರೂ.) ಅಧಿಕವಾಗಿದೆ. ಭಾರತೀಯ ಗ್ರಾಹಕರು ಸ್ವಿಸ್‌ಬ್ಯಾಂಕ್‌ಗಳಲ್ಲಿ ಸುಮಾರು 1.2 ದಶಲಕ್ಷ ಸ್ವಿಸ್ ಫ್ರಾಂಕ್ (8392 ಕೋಟಿ ರೂ.) ಮೊತ್ತದ ಹಣವನ್ನು ಠೇವಣಿಯಿರಿಸಿದ್ದಾರೆ. ಆದರೆ ಇದು ಸ್ವಿಸ್ ಬ್ಯಾಂಕ್‌ಗಳಲ್ಲಿರುವ ಒಟ್ಟು ವಿದೇಶಿ ಗ್ರಾಹಕರ ಹಣದ ಶೇ.0.1ರಷ್ಟು ಮಾತ್ರವೇ ಆಗಿದೆಯೆಂದು ವರದಿ ಹೇಳಿದೆ.
ಪಾಕಿಸ್ತಾನದ ಗ್ರಾಹಕರು 1.5 ಶತಕೋಟಿ ಸ್ವಿಸ್ ಫ್ರಾಂಕ್‌ಗಳನ್ನು ಠೇವಣಿಯಿರಿಸಿದ್ದು 69ನೇ ಸ್ಥಾನದಲ್ಲಿದ್ದಾರೆ.
ಬ್ರಿಕ್ಸ್ ಒಕ್ಕೂಟದ ರಾಷ್ಟ್ರಗಳ ಪೈಕಿ ಭಾರತವು ಅತ್ಯಂತ ಕಡಿಮೆ ಮೊತ್ತದ ಹಣವನ್ನು ಸ್ವಿಸ್ ಬ್ಯಾಂಕ್‌ಗಳಲ್ಲಿ ಠೇವಣಿಯಿರಿಸಿದೆ. ಈ ಒಕ್ಕೂಟದ ಇತರ ರಾಷ್ಟ್ರಗಳ ರ್ಯಾಂಕಿಂಗ್‌ಗಳು ಹೀಗಿವೆ. ರಶ್ಯ-17 (17.6 ಶತಕೋಟಿ ಸಿಎಚ್‌ಎಫ್), ಚೀನಾ 28 (7.4 ಬಿಲಿಯ ಸಿಎಚ್‌ಎಫ್), ಬ್ರೆಝಿಲ್ 37 (4.8 ಬಿಲಿಯ ಸಿಎಚ್‌ಎಫ್) ಹಾಗೂ ದಕ್ಷಿಣ ಆಪ್ರಿಕ -60 ( 2.2 ಬಿಲಿಯ ಸಿಎಚ್‌ಎಫ್).