ನೊಬೆಲ್ ಪುರಸ್ಕೃತ ಸಾಹಿತಿ ವಿಸೆಲ್ ಇನ್ನಿಲ್ಲ
Update: 2016-07-04 00:01 IST
ಜೆರುಸಲೇಂ,ಜು.3: ಹಿಟ್ಲರ್‌ನ ನಾಝಿ ಸರಕಾರದ ಆಳ್ವಿಕೆಯಲ್ಲಿ ನಡೆದ ಯೆಹೂದ್ಯರ ನರಮೇಧಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಖ್ಯಾತ ಸಾಹಿತಿ ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಎಲಿ ವಿಸೆಲ್ ಶನಿವಾರ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.ಅಮೆರಿಕ ನ್ಯೂಯಾರ್ಕ್ ನಗರದಲ್ಲಿರುವ ಸ್ವಗೃಹದಲ್ಲಿ ನಿಧನರಾದ ಅವರು ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರೆಂದು ಅಧಿಕೃತ ಮೂಲಗಳು ತಿಳಿಸಿವೆ. ಎರಡನೆ ವಿಶ್ವಮಹಾಯುದ್ಧದ ವೇಳೆ ಹಿಟ್ಲರ್‌ನ ನಾಝಿ ಪಡೆಗಳು ನಡೆಸಿದ ಯೆಹೂದ್ಯರ ಮಾರಣಹೋಮದ ನೆನಪನ್ನು ಜೀವಂತವಾಗಿಡುವಂತಹ ಕೃತಿಗಳನ್ನು ಬರೆದಿದ್ದರು. ರೊಮೆನಿಯಾದಲ್ಲಿ ಜನಿಸಿದ ವಿಸೆಲ್, ಎರಡನೆ ಮಹಾಯುದ್ಧದ ಬಳಿಕ ಅಮೆರಿಕದ ಪೌರತ್ವ ಸ್ವೀಕರಿಸಿದ್ದರು.