ಮೋದಿಯನ್ನು ಬೆಂಬಲಿಸಿದ್ದಕ್ಕೆ ಪಶ್ಚಾತ್ತಾಪ ಇದೆ: ರಾಮ್‌ಜೇಠ್ಮಲಾನಿ
ಲಕ್ನೊ,ಜುಲೈ 4: 2014ರ ಲೋಕಸಭಾಚುನಾವಣೆಯಲ್ಲಿ ನರೇಂದ್ರಮೋದಿಯನ್ನು ವಿದೇಶಿ ಬ್ಯಾಂಕ್‌ಗಳಿಂದ ಕಪ್ಪುಹಣ ತರುವುದು ಸಹಿತ ಹಲವು ಭರವಸೆಗಳ ಹಿನ್ನೆಲೆಯಲ್ಲಿ ಬೆಂಬಲಿಸಿದ್ದೆ ಆದರೆ ಇಂದು ತಾನು ಅದಕ್ಕಾಗಿ ಸ್ವಯಂ ಪಶ್ಚಾತ್ತಾಪ ಪಡುವಂತಾಗಿದೆ ಎಂದು ಕೇಂದ್ರದ ಮಾಜಿ ಕಾನೂನು ಸಚಿವ ರಾಮ್‌ಜೇಠ್ಮಲಾನಿ ಹೇಳಿದ್ದಾರೆ. ಮೋದಿಯನ್ನು ಪ್ರಧಾನಿ ಮಾಡುವಲ್ಲಿ ತನ್ನ ಪಾತ್ರವೂ ಇದೆ.ಯಾಕೆಂದರೆ ಅವರು ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರುವ ಭರವಸೆಯನ್ನು ಲೋಕಸಭಾ ಚುನಾವಣಾ ಪ್ರಚಾರ ಸಭೆಗಳಲ್ಲಿ ನೀಡಿದ್ದರು ಎಂದು ರಾಮ್‌ಜೇಠ್ಮಲಾನಿ ಲಕ್ನೊದಲ್ಲಿ ನಡೆದ ಸಮಾಜವಾದಿ ಸಿಂಧಿ ಸಮಾಜದ ಪ್ರಾಂತೀಯ ಸಮ್ಮೇಳನದಲ್ಲಿ ಹೇಳಿದ್ದಾರೆ.
ಪ್ರಧಾನಿ ಆದ ಮೇಲೆ ಕಪ್ಪು ಹಣವನ್ನು ಮೋದಿ ವಾಪಸು ತರಲಿಲ್ಲ. ಅವರು ತನ್ನ ಭರವಸೆಯನ್ನು ಪೂರ್ತಿಗೊಳಿಸುವ ಧೈರ್ಯವೂಇಲ್ಲ ಆದ್ದರಿಂದ ಮೋದಿಗೆ ಸಹಾಯ ಮಾಡಿ ಸ್ವಯಂ ವಂಚಿಸಲ್ಪಟ್ಟೆ ಮತ್ತು ತಪ್ಪಿತಸ್ಥನಾದೆ ಎಂದುಅನಿಸುತ್ತಿದೆ. ಮಾತ್ರವಲ್ಲ ನಾನೀಗ ನಿಮ್ಮ ಬಳಿಗೆ ನೀವು ಪ್ರಧಾನಿ ಮಾತುಗಳಲ್ಲಿ ಭರವಸೆ ಇಡಬೇಡಿ ಎನ್ನಲು ಬಂದಿದ್ದೇನೆ ಎಂದು ಜೇಠ್ಮಲಾನಿ ಹೇಳಿದ್ದಾರೆ.ಮುಖ್ಯಮಂತ್ರಿ ಅಖಿಲೇಶ್ ಯಾದವ್‌ರು ಉತ್ತಮ ಚಾರಿತ್ರ್ಯ ಹೊಂದಿದ ವ್ಯಕ್ತಿಯಾಗಿದ್ದಾರೆ. ಅವರು ದೇಶದ ಭವಿಷ್ಯಎಂದು ಜೇಠ್ಮಲಾನಿ ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ರನ್ನು ಹೊಗಳಿದ್ದಾರೆ. ಸಿಂಧಿ ಸಭೆಯ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತಾಡಿದ ಅವರು ಉತ್ತರ ಪ್ರದೇಶದ ಮುಂಬರುವ ಚುನಾವಣೆಯಲ್ಲಿ ಸಂಪೂರ್ಣ ಪಾಲ್ಗೊಳ್ಳಬೇಕೆಂದು ಸಲಹೆ ನೀಡಿದ್ದಾರೆ.ಉತ್ತರಪ್ರದೇಶದಲ್ಲಿರುವ 35ಲಕ್ಷ ಸಿಂಧಿಗಳ ಅಭಿವೃದ್ಧಿಗಾಗಿ ಮಂಡಳಿ ರಚಿಸಲು ಹಾಗೂ ಸಿಂಧಿಗಳಿಗೆ ಅಲ್ಪಸಂಖ್ಯಾತರ ಸ್ಥಾನ ನೀಡುವುದು ಮುಂತಾದ ಬೇಡಿಕೆಗಳಿರುವ ಜ್ಞಾಪನಾ ಪತ್ರವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ರಿಗೆ ಸಿಂಧಿಗಳ ವತಿಯಿಂದ ನೀಡಲಾಯಿತು.