×
Ad

ಫೆಲೆಸ್ತೀನ್ ಆಕ್ರಮಣ ಅಂತ್ಯಗೊಳಿಸುವ ತನಕ ಇಸ್ರೇಲಿ ಉತ್ಪನ್ನಗಳನ್ನು ಬಹಿಷ್ಕರಿಸಲು ನಿರ್ಧರಿಸಿದ ಐಸ್ ಲಾಂಡ್

Update: 2016-07-04 11:58 IST

ಐಸ್ ಲಾಂಡ್,ಜು.4 : ಫೆಲೆಸ್ತೀನ್ ಪ್ರಾಂತ್ಯದ ಆಕ್ರಮಣವನ್ನು ಅಂತ್ಯಗೊಳಿಸುವ ತನಕ ಎಲ್ಲಾ ಇಸ್ರೇಲಿ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಐಸ್ ಲಾಂಡ್ ರಾಜಧಾನಿ ರೇಯ್ಕ್ ಜವಿಕ್ ನಲ್ಲಿ ರವಿವಾರ ನಡೆದ ಜನ ಮತದಲ್ಲಿ  ನಿರ್ಧಾರವಾಗಿದೆ.

ಸುಮಾರು 170 ಫೆಲೆಸ್ತೀನಿ ಸಂಘಟನೆಗಳು 2005 ರಲ್ಲಿ ಆರಂಭಿಸಿದ ಬಾಯ್ಕಾಟ್, ಡೈವೆಸ್ಟ್ ಮೆಂಟ್ ಎಂಡ್ ಸ್ಯಾಂಕ್ಷನ್ಸ್ (ಬಿಎಎಸ್) ಮೂವ್ ಮೆಂಟ್  ಎಗೇನ್ಸ್ ಟೆಲ್ ಅವೀವ್ ಅಂಗವಾಗಿ ಈ ಜನಮತ ನಡೆದಿದೆ. ಅಂತಾರಾಷ್ಟ್ರೀಯ ಕಾನೂನಿನಂತೆ ನಡೆದುಕೊಳ್ಳಲು ಇಸ್ರೇಲ್ ಒಪ್ಪಿಕೊಳ್ಳುವ ತನಕ ಅದರ ವಿರುದ್ಧ ವಿವಿಧ ರೀತಿಯ ಬಹಿಷ್ಕಾರ ಹೇರಬೇಕೆಂಬುದು ಈ ಆಂದೋಲನದ ಆಶಯವಾಗಿದೆ.
ಆದರೆ ಐಸ್ ಲಾಂಡ್ ನಿಧರ್ಾರವನ್ನು ಇಸ್ರೇಲ್ ನ ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದ್ದು ಇದನ್ನು ಅಸಮರ್ಥನೀಯವೆಂದು ಬಣ್ಣಿಸಿದೆ.

ವಿಶ್ವದಾದ್ಯಂತ ಶಿಕ್ಷಣ ತಜ್ಞರು ಹಾಗೂ ಸಾಮಾಜಿಕ ಕಾರ್ಯಕರ್ತರು ಟುನಿಷಿಯಾದಲ್ಲಿ ಆಗಸ್ಟ್ 4 ರಿಂದ 6 ರ ತನಕ  ಸಭೆ ಸೇರಿ ಈ ಆಂದೋಲನವನ್ನು ಮತ್ತಷ್ಟು ಸುದೃಢಗೊಳಿಸಲು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲು  ಪ್ರಸ್ತಾಸಿರುವ ಬೆನ್ನಲ್ಲೇ ಐಸ್ ಲಾಂಡ್ ನಲ್ಲಿ ಈ ಬೆಳವಣಿಗೆ ನಡೆದಿದೆ. ಈಗಾಗಲೇ ಈ ಬಿಡಿಎಸ್ ಆಂದೋಲನಕ್ಕೆ ವಿಶ್ವದಾದ್ಯಂತ ಕಾರ್ಮಿಕ ಸಂಘಟನೆಗಳು, ಉದ್ಯಮಗಳು, ಶಿಕ್ಷಣ ಸಂಸ್ಥೆಗಳು ಸಹಿತ ಸಾವಿರಾರು ಸ್ವಯಂಸೇವಕರು ಸೇರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News