×
Ad

ಶರೀರದಲ್ಲಿ ಚುಚ್ಚಿ ಇಡುವ ಕ್ಯಾಮರಾ ತಯಾರಿಸಿದ ಜರ್ಮನಿ ಸಂಶೋಧಕರು

Update: 2016-07-04 14:12 IST

ಜರ್ಮನ್,ಜುಲೈ 4: ತ್ರೀಡಿ ಪ್ರಿಂಟಿಂಗ್ ಉಪಯೋಗಿಸಿ ಬರೇ ಒಂದು ಉಪ್ಪುಕಣದಷ್ಟು ಸಣ್ಣಗಾತ್ರದ ಕ್ಯಾಮರಾವನ್ನು ತಯಾರಿಸುವಲ್ಲಿ ಜರ್ಮನಿಯ ಇಂಜಿನಿಯರುಗಳ ತಂಡವೊಂದು ಯಶಸ್ವಿಯಾಗಿದೆ. ಇದನ್ನು ದೇಹಕ್ಕೆ ಚುಚ್ಚಿ ಇರಿಸಬಹದಾದ ಚಿಕ್ಕಕ್ಯಾಮರಾವಾಗಿದೆ. ಆಂತರಿಕ ಅವಯವಗಳ ನಿರೀಕ್ಷೆಗಾಗಿ ಎಂಡೋಸ್ಕೋಪ್ ಕ್ಯಾಮರಾವಾಗಿ ಈ ಪುಟ್ಟ ಕ್ಯಾಮರಾವನ್ನುಬಳಸಬಹುದಾಗಿದೆ. ಮೂರು ಕೂದಲೆಳೆಯಷ್ಟು ದೊಡ್ಡದಿರುವ ಆಪ್ಟಿಕಲ್ ಫೈಬರ್‌ನಲ್ಲಿ ಸಣ್ಣಮೂರು ಲೆನ್ಸ್‌ಗಳಿರುವ ಕ್ಯಾಮರಾವನ್ನು ಸ್ಟಟ್‌ಗರ್ಟ್ ವಿಶ್ವವಿದ್ಯಾನಿಲಯದ ಸಂಶೋಧಕರು ರೂಪಿಸಿದ್ದಾರೆ ಎಂದು ನೇಚರ್ ಪೋರ್ಟೋನಿಕ್ಸ್ ಜರ್ನಲ್ ವರದಿಮಾಡಿದೆ. ಈಗ ಕ್ಯಾಮರಾದ ಪ್ರಾಥಮಿಕ ಹಂತ ನಿರ್ಮಾಣ ಪೂರ್ತಿಯಾಗಿದ್ದು ಇನ್ನೂ ಸಂಶೋಧನೆ ನಡೆಯುತ್ತಿದೆ. ಈ ಸಪುಟ್ಟ ಕ್ಯಾಮರಾದ ವಿನ್ಯಾಸ ತಯಾರಿಗೆ ಗಂಟೆಗಳ ಕಾಲ ಸಮಯಸಾಕಾಯಿತೆಂದು ಸಂಶೋಧಕರು ಹೇಳಿದ್ದಾರೆ. ಮೈಕ್ರೋಮೀಟರ್(0.1 ಮಿಲಿಮೀರ್) ಅಗಲದ ಲೆನ್ಸ್ ಇದರಲ್ಲಿವೆ. ಕವಚ ಸೇರಿ 20 ಮೈಕ್ರೋಮೀಟರ್ ಅಗಲವಾಗುವುದು. 3.0 ಮಿಲಿಮೀಟರ್ ವ್ಯಾಪ್ತಿಯ ದೃಶ್ಯಗಳನ್ನು ಈ ಕ್ಯಾಮರಾ ಸೆರೆಹಿಡಿಯಲಿವೆ. ಆಪ್ಟಿಕಲ್ ಫೈಬರ್‌ನಲ್ಲಿ ಇದು ಪ್ರಿಂಟ್ ಆಗುವುದು.

ಸಿರಿಂಜ್‌ನ ಸೂಜಿಯೊಳಗೆ ಇರಿಸಬಹುದಾದ ಕ್ಯಾಮರಾವನ್ನುಮನುಷ್ಯನ ಶರೀರದಲ್ಲಿ ಅಗತ್ಯವಿದ್ದರೆಮೆದುಳಿನೊಳಗೂ ಇಂಜೆಕ್ಟ್ ಮಾಡಬಹುದಾಗಿದೆ. ಆಪ್ಟಿಕಲ್‌ಗಳಲ್ಲದೆ ಡಿಜಿಟಲ್ ಕ್ಯಾಮರಾಗಳಲ್ಲಿ ಬಳಸಿದ ಸೆನ್ಸರುಗಳು ಕ್ಯಾಮರಾದಲ್ಲಿ ಚಿತ್ರವನ್ನು ತೆಗೆಯಲಿದೆ. ದೇಹದ ಚಿತ್ರ ತೆಗೆಯಲು ಮಾತ್ರವಲ್ಲ ಅದೃಶ್ಯ ರಹಸ್ಯ ನಿರೀಕ್ಷಣೆಗೂ ಮುನ್ನೆಚ್ಚರಿಕೆ ವ್ಯವಸ್ಥೆಗೂ ಈ ಕ್ಯಾಮರಾವನ್ನು ಬಳಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News