ಸಾನಿಯಾ-ಹಿಂಗಿಸ್ ಕ್ವಾರ್ಟರ್‌ಫೈನಲ್‌ಗೆ, ಬೋಪಣ್ಣ ಔಟ್
Update: 2016-07-04 23:40 IST
ಲಂಡನ್, ಜು.4: ಹಾಲಿ ಚಾಂಪಿಯನ್ ಸಾನಿಯಾ ಮಿರ್ಝಾ ಹಾಗೂ ಮಾರ್ಟಿನಾ ಹಿಂಗಿಸ್ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ತಲುಪಿದರೆ, ರೋಹನ್ ಬೋಪಣ್ಣ ಹಾಗೂ ಫ್ಲಾರಿನ್ ಮೆರ್ಗಿಯಾ ಕೂಟದಿಂದ ಹೊರ ನಡೆದಿದ್ದಾರೆ.
ಸೋಮವಾರ ನಡೆದ ಮಹಿಳೆಯರ ಡಬಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ಇಂಡೋ-ಸ್ವಿಸ್ ಜೋಡಿ ಸಾನಿಯಾ ಹಾಗೂ ಹಿಂಗಿಸ್ ಅಮೆರಿಕ-ಲಾಟ್ವಿಯಾದ ಕ್ರಿಸ್ಟಿನಾ ಮೆಕಾಲೆ ಹಾಗೂ ಜೆಲೆನಾ ಒಸ್ಟಪೆಂಕೊರನ್ನು ಕೇವಲ 46 ನಿಮಿಷಗಳ ಹೋರಾಟದಲ್ಲಿ 6-1, 6-0 ಸೆಟ್‌ಗಳ ಅಂತರದಿಂದ ಸೋಲಿಸಿದರು.
ಇದೇ ವೇಳೆ, 6ನೆ ಶ್ರೇಯಾಂಕದ ಬೋಪಣ್ಣ-ಮೆರ್ಗಿಯಾ ಜೋಡಿ ಪುರುಷರ ಡಬಲ್ಸ್‌ನ 3ನೆ ಸುತ್ತಿನ ಪಂದ್ಯದಲ್ಲಿ ಹೆನ್ರಿ ಕಾಂಟಿನೆನ್ ಹಾಗೂ ಜಾನ್ ಪೀಯರ್ಸ್ ವಿರುದ್ಧ 6-2, 3-6, 4-6, 7-6(8/6), 6-8 ಸೆಟ್‌ಗಳ ಅಂತರದಿಂದ ಶರಣಾದರು.