×
Ad

ಜಸ್ಟಿನ್ ಗಾಟ್ಲಿನ್ ರಿಯೋ ಒಲಿಂಪಿಕ್ಸ್‌ಗೆ

Update: 2016-07-04 23:41 IST

ಎವ್‌ಜಿನ್, ಜು.4: ಅಮೆರಿಕ ಒಲಿಂಪಿಕ್ ಟ್ರಯಲ್ಸ್‌ನಲ್ಲಿ 100 ಮೀ. ಓಟದ ಸ್ಪರ್ಧೆಯಲ್ಲಿ ವೇಗವಾಗಿ ಗುರಿ ತಲುಪಿದ ಜಸ್ಟಿನ್ ಗಾಟ್ಲಿನ್ ರಿಯೋ ಒಲಿಂಪಿಕ್ಸ್‌ಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

 ಹೇವಾರ್ಡ್ ಫೀಲ್ಡ್‌ನಲ್ಲಿ ನಡೆದ 100 ಮೀ. ಓಟದಲ್ಲಿ 9.8 ಸೆಕೆಂಡ್‌ನಲ್ಲಿ ಗುರಿ ತಲುಪಿದ ಗಾಟ್ಲಿನ್ ಪ್ರತಿ ಸ್ಪರ್ಧಿ ಟ್ರೆಯೊನ್ ಬ್ರೊಮೆಲ್‌ರನ್ನು ಹಿಂದಿಕ್ಕಿದರು. 9.84 ಸೆಕೆಂಡ್‌ನಲ್ಲಿ ಗುರಿ ತಲುಪಿದ ಬ್ರೊಮೆಲ್ ಎರಡನೆ ಸ್ಥಾನ ಪಡೆದರೆ, ಮಾರ್ವಿನ್ ಬ್ರಾಸಿ(9.98 ಸೆ.) ಮೂರನೆ ಸ್ಥಾನ ಪಡೆದರು.

34ರ ಹರೆಯದ 2004ರ ಒಲಿಂಪಿಕ್ಸ್ ಚಾಂಪಿಯನ್ ಗಾಟ್ಲಿಂಗ್ ರಿಯೋ ಗೇಮ್ಸ್‌ಗೆ ಅರ್ಹತೆ ಪಡೆಯುವುದರೊಂದಿಗೆ ಹಾಲಿ ಚಾಂಪಿಯನ್ ಉಸೇನ್ ಬೋಲ್ಟ್‌ಗೆ ನಡುಕ ಹುಟ್ಟಿಸಿದ್ದಾರೆ.

 ತನ್ನ ವಿವಾದಾತ್ಮಕ ವೃತ್ತಿಜೀವನದಲ್ಲಿ ಗಾಟ್ಲಿನ್ ಡೋಪಿಂಗ್ ಪ್ರಕರಣದಲ್ಲಿ ಸಿಲುಕಿ ಎರಡು ಬಾರಿ ನಿಷೇಧಕ್ಕೆ ಗುರಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News