×
Ad

ಸಿಎಟಿಗೆ ಮಾಜಿ ನ್ಯಾಯಾಧೀಶ ಮತ್ತು ಮಾಜಿ ಐಎಎಸ್ ಅಧಿಕಾರಿಯ ನೇಮಕ ರದ್ದು

Update: 2016-07-05 00:19 IST

ಹೊಸದಿಲ್ಲಿ,ಜು.4: ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ(ಸಿಎಟಿ)ಕ್ಕೆ ಪಟ್ನಾ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಮಿಹಿರ್ ಕುಮಾರ್ ಝಾ ಮತ್ತು ಮಾಜಿ ಐಎಎಸ್ ಅಧಿಕಾರಿ ಜಿ.ಸುಧೀರ್ ಅವರ ನೇಮಕಾತಿಗಳನ್ನು ಕೇಂದ್ರ ಸರಕಾರವು ರದ್ದುಗೊಳಿಸಿದೆ. ಹುದ್ದೆಗೆ ಹಾಜರಾಗುವಲ್ಲಿ ಅವರ ವೈಫಲ್ಯ ಸರಕಾರದ ಈ ಕ್ರಮಕ್ಕೆ ಕಾರಣವಾಗಿದೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಝಾ ಮತ್ತು ಸುಧೀರ್ ಅವರನ್ನು ಅನುಕ್ರಮವಾಗಿ ಸಿಎಟಿಯ ಪಟ್ನಾ ಮತ್ತು ಎರ್ನಾಕುಳಂ ಪೀಠಗಳ ಸದಸ್ಯರಾಗಿ ನೇಮಕಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News