6ವರ್ಷದ ಬಾಲಕಿಯನ್ನು ಕೊಂದು ಪೂಜಾಕೋಣೆಯಲ್ಲಿ ಅಡಗಿಸಿಟ್ಟ 17ವರ್ಷದ ಹುಡುಗ !

Update: 2016-07-05 05:21 GMT

   ಸೇಲಂ,ಜುಲೈ 5: ತಮಿಳ್ನಾಡಿನ ಸೇಲಂನಲ್ಲಿ ಆರುವರ್ಷದ ಬಾಲಕಿಯನ್ನು ಕೊಂದು ಪೂಜಾಕೋಣೆಯಲ್ಲಿ ಆಹಾರ ಬೇಯಿಸುವ ಪಾತ್ರೆಯಲ್ಲಿ ಅಡಗಿಸಿಟ್ಟ ಘಟನೆ ವರದಿಯಾಗಿದೆ. ನೆರೆಯ ಹದಿನೇಳು ವರ್ಷದ ಹುಡುಗ ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟು ಬಳಿಕ ಕೊಂದು ಹಾಕಿದನೆನ್ನಲಾಗಿದೆ. ಆರೋಪಿ ಎರಡನೆ ತರಗತಿಯಲ್ಲಿ ಕಲಿಯುವ ಮಗುವನ್ನು ಮಿಠಾಯಿ ಕೊಡುವೆ ಎಂದು ಹೇಳಿ ಮನೆಗೆ ಕರೆದುಕೊಂಡು ಬಂದು ಕಿರುಕುಳ ನೀಡಲು ಯತ್ನಿಸಿದ್ದಾನೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಪತ್ತೆಹಚ್ಚಿದ್ದಾರೆ. ಆದರೆ ಲೈಂಗಿಕ ಕಿರುಕುಳ ನಡೆದಿದೆಯೇ ಎಂಬುದನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ. ಹೆಚ್ಚಿನ ತನಿಖೆಯಿಂದಷ್ಟೇ ಈ ಬಗ್ಗೆ ಮಾಹಿತಿ ತಿಳಿಯಲಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

 ಕಿರುಕುಳ ಕೊಟ್ಟ ಬಳಿಕ ಮಗು ಬಳಲಿತ್ತು. ಆಗ ಉಸಿರುಕಟ್ಟಿಸಿ ಕೊಂದು ಹಾಕಿದ್ದಾನೆ. ಮೃತದೇಹವನ್ನು ಅಡಗಿಸಿಡಲಿಕ್ಕಾಗಿ ಅಡುಗೆ ಪಾತ್ರೆಯೊಳಗೆ ಮಗುವಿನ ಮೃತದೇಹವನ್ನು ಹಾಕಿದ್ದಾನೆ. ಪೊಲೀಸರು ತನಿಖೆಮಾಡಿ ಪೂಜಾಕೋಣೆಯಲ್ಲಿ ಅಡಗಿಸಿಟ್ಟ ಪಾತ್ರೆಯನ್ನು ವಶಪಡಿಸಿಕೊಂಡಿದ್ದಾರೆ. ಮಗುವಿನ ತಾಯಿ ಶನಿವಾರದಿಂದ ತನ್ನ ಮಗು ಕಾಣೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News