ಮದೀನಾ ಮಸೀದಿ ದಾಳಿ: ಬಾಂಬರ್ ಪಾಕಿಸ್ತಾನಿ ಪ್ರಜೆ
Update: 2016-07-05 20:02 IST
ರಿಯಾದ್, ಜು. 5: ಮದೀನಾದ ಪ್ರವಾದಿ ಮಸೀದಿ ಮೇಲೆ ಸೋಮವಾರ ದಾಳಿ ನಡೆಸಿದ ಆತ್ಮಹತ್ಯಾ ಬಾಂಬರ್ ಸೌದಿ ಅರೇಬಿಯದಲ್ಲಿ ವಾಸಿಸುತ್ತಿದ್ದ ಪಾಕಿಸ್ತಾನಿ ಪ್ರಜೆ ಎಂಬುದಾಗಿ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
ಆತ್ಮಹತ್ಯಾ ಬಾಂಬರ್ 34 ವರ್ಷದ ಅಬ್ದುಲ್ಲಾ ಕಲ್ಝಾರ್ ಖಾನ್ ಎಂಬುದಾಗಿ ಆಂತರಿಕ ಸಚಿವಾಲಯದ ಹೇಳಿಕೆಯೊಂದು ತಿಳಿಸಿದೆ. ಆತ ತನ್ನ ಹೆಂಡತಿ ಮತ್ತು ಆಕೆಯ ಹೆತ್ತವರೊಂದಿಗೆ ಜಿದ್ದಾದಲ್ಲಿ 12 ವರ್ಷಗಳಿಂದ ವಾಸಿಸುತ್ತಿದ್ದನು ಹಾಗೂ ಚಾಲಕನಾಗಿ ಕೆಲಸ ಮಾಡುತ್ತಿದ್ದನು ಎಂದಿದೆ.