×
Ad

ಚುನಾವಣಾ ಕಾಳಗಕ್ಕೆ ಸಜ್ಜು: ಉತ್ತರಪ್ರದೇಶದ ಮೂವರಿಗೆ ಸಚಿವ ಸ್ಥಾನ

Update: 2016-07-05 23:32 IST

ಹೊಸದಿಲ್ಲಿ,ಜು.5: ಮುಂಬರುವ ವಿಧಾನಸಭಾ ಚುನಾವಣೆಗಳ ಮೇಲೆ ಕಣ್ಣಿಟ್ಟು ಹಾಗೂ ಬಿಜೆಪಿ ಬಲಿಷ್ಠವಾಗಿರುವ ರಾಜ್ಯಗಳಿಗೆ ಯೋಗ್ಯ ಪ್ರಾತಿನಿಧ್ಯವನ್ನು ನೀಡುವ ಉದ್ದೇಶದಿಂದೊಂದಿಗೆ ಕೇಂದ್ರ ಸಂಪುಟವನ್ನು ವಿಸ್ತರಿಸಲಾಗಿದೆಯೆಂದು ಬಿಜೆಪಿಯ ಮೂಲಗಳು ತಿಳಿಸಿವೆ. ರಾಜಸ್ಥಾನದಿಂದ ನಾಲ್ವರು ಸಂಸದರು ಹಾಗೂ ಉತ್ತರಪ್ರದೇಶ, ಮದ್ಯಪ್ರದೇಶ ಹಾಗೂ ಗುಜರಾತ್ ರಾಜ್ಯಗಳ ತಲಾ ಮೂವರು ಸಂಸದರು ಇಂದು ಪುನಾರಚನೆಯಾದ ಮೋದಿ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

   ನೂತನ ಸಚಿವರ ಪೈಕಿ ಮಹೇಂದ್ರ ನಾಥ ಪಾಂಡೆ, ಕೃಷ್ಣ ರಾಜ್ ಹಾಗೂ ಅನುಪ್ರಿಯಾ ಸಿಂಗ್ ಪಟೇಲ್ ಉತ್ತರಪ್ರದೇಶದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಉತ್ತರಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಗುಜರಾತ್‌ನಲ್ಲಿಯೂ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಆ ರಾಜ್ಯದ ಮೂವರು ಸಂಸದರಾದ, ಮನ್‌ಸುಖ್ ಮಾಂಡವೀಯ, ಪುರುಷೋತ್ತಮ್ ರೂಪಾಲಾ ಹಾಗೂ ಜಸ್ವಂತ್ ಭಾಬೋರ್ ಕೂಡಾ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಉತ್ತರಖಂಡ ವಿಧಾನಸಭಾ ಉ ಚುನಾವಣೆಯ ದೃಷ್ಟಿಯಿಂದ ಆ ರಾಜ್ಯದ ದಲಿತ ನಾಯಕ ಅಲ್‌ಮೋರಾ ಅಜಯ್ ತಾಮ್ತಾರಿಗೆ ಸಂಪುಟದಲ್ಲಿ ಸ್ಥಾನ ದೊರೆತಿದೆ. ಬಿಜೆಪಿಯ ಮಿತ್ರ ಪಕ್ಷವಾದ ಆರ್‌ಪಿಐ ನಾಯಕ ರಾಮ್‌ದಾಸ್ ಅಠವಳೆ ಕೂಡಾ ಸಚಿವ ಸ್ಥಾನ ನೀಡಲಾಗಿದೆ.
 ಪಶ್ಚಿಮ ಬಂಗಾಳದಿಂದ ಎಸ್.ಎಸ್.ಅಹ್ಲುವಾಲಿಯಾ (ಡಾರ್ಜಿಲಿಂಗ್), ಕರ್ನಾಟಕದಿಂದ ರಮೇಶ್ ಜಿಗಜಿಣಗಿ (ಬಿಜಾಪುರ) ಹಾಗೂ ಅಸ್ಸಾಂನ ರಾಜನ್ ಗೊಹೈನ್ (ನೌಗಾಂಗ್) ಸಂಪುಟ ಸೇರಿದ್ದಾರೆ. ನೂತನ ಸಚಿವರ ಪೈಕಿ ವಿಜಯ್ ಗೋಯಲ್ ಹಾಗೂ ಫಗನ್ ಖುಲಾಸ್ತೆ ಅವರನ್ನು ಹೊರತುಪಡಿಸಿ ಉಳಿದೆಲ್ಲರೂ ಹೊಸ ಮುಖಗಳಾಗಿದ್ದಾದ್ದಾರೆ. ಇವರಲ್ಲಿ ಕೆಲವರು ಈ ಮೊದಲು ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News