ಪ್ರೊ ಕಬಡ್ಡಿ: ಟೈಟಾನ್ಸ್‌ಗೆ ತಿವಿದ ಬೆಂಗಳೂರು ಬುಲ್ಸ್
Update: 2016-07-05 23:45 IST
ಹೈದರಾಬಾದ್, ಜು.5: ರೋಹಿತ್ ಕುಮಾರ್ ಅವರ ವೀರೋಚಿತ ಪ್ರದರ್ಶನದ ನೆರವಿನಿಂದ ಬೆಂಗಳೂರು ಬುಲ್ಸ್ ತಂಡ ತೆಲುಗು ಟೈಟಾನ್ಸ್ ತಂಡವನ್ನು ಪ್ರೊ ಕಬಡ್ಡಿ ಲೀಗ್‌ನಲ್ಲಿ 30-28 ಅಂತರದಿಂದ ಮಣಿಸಿತು.
ರೋಹಿತ್ ಬುಲ್ಸ್ ಪರ 11 ರೈಡ್ ಪಾಯಿಂಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಕಾಣಿಕೆ ನೀಡಿದರು. ತವರು ಮೈದಾನದಲ್ಲಿ ಆಡಿದ ತೆಲುಗು ಟೈಟಾನ್ಸ್ ಕೆಲವು ಕ್ಷುಲ್ಲಕ ತಪ್ಪೆಸಗಿತು.
5 ಪಂದ್ಯಗಳಲ್ಲಿ 18 ಅಂಕವನ್ನು ಗಳಿಸಿರುವ ಬೆಂಗಳೂರು ಬುಲ್ಸ್ ತಂಡ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನ ತಲುಪಿತು. 5 ಪಂದ್ಯಗಳಲ್ಲಿ 9 ಅಂಕ ಗಳಿಸಿದ ತೆಲುಗು ಟೈಟಾನ್ಸ್ ಆರನೆ ಸ್ಥಾನಕ್ಕೇರಿದೆ.