ಮಾಧ್ಯಮಗಳಲ್ಲಿ ಡಾ.ಝಾಕೀರ್ ನಾಯ್ಕ್ ವಿರುದ್ಧದ ಅಪಪ್ರಚಾರ ನಿಲ್ಲಿಸಿ

Update: 2016-07-06 17:25 GMT

ಹೊಸದಿಲ್ಲಿ, ಜು.6: ಬಾಂಗ್ಲಾದೇಶದಲ್ಲಿ ನಡೆದ ಅಮಾನವೀಯ ಭಯೋತ್ಪಾದಕ ದಾಳಿ ಘಟನೆಯ ಹಿನ್ನೆಲೆಯಲ್ಲಿ, ದಾಳಿಕೋರರು ಡಾ.ಝಾಕೀರ್ ನಾಯ್ಕ್ ಅವರ ಅನುಯಾಯಿಗಳು ಎಂಬ ಅರ್ಥದಲ್ಲಿ ಭಾರತೀಯ ಮಾಧ್ಯಮಗಳು ಬಿಂಬಿಸುತ್ತಿರುವ ಹಿನ್ನೆಲೆಯಲ್ಲಿ, ಆ ಅಪಪ್ರಚಾರ ತಡೆಯುವಂತೆ ಆಗ್ರಹಿಸಿ ಪತ್ರಿಕಾ ಮಂಡಳಿಗೆ ಮನವಿ ಸಲ್ಲಿಸುವ ಅಭಿಯಾನ ಆರಂಭಿಸಲು ನಿರ್ಧರಿಸಲಾಗಿದೆ.

ಈಗಾಗಲೇ ಈ ಅಪಪ್ರಚಾರವನ್ನು ತಡೆಯುವ ಸಲುವಾಗಿ change.org  ಎಂಬ ವೆಬ್‌ಸೈಟ್‌ನಲ್ಲಿ ಈಗಾಗಲೇ ಆಂದೋಲನ ಆರಂಭವಾಗಿದೆ. ಡಾ.ಝಾಕೀರ್ ನಾಯ್ಕ್ ಅವರು ತಮ್ಮ ಉಪನ್ಯಾಸಗಳಲ್ಲಿ, ಮುಸ್ಲಿಮರು ಭಯೋತ್ಪಾದಕರಾಗಬೇಕು ಎಂದು ಕರೆ ನೀಡುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇವರು ಬಾಂಗ್ಲಾ ದಾಳಿಕೋರರಿಗೆ ಸ್ಫೂರ್ತಿಯಾಗಿದ್ದರು ಎಂದು ಮಾಧ್ಯಮಗಳು ಆಪಾದಿಸಿದ್ದವು. ಝಾಕೀರ್ ನಾಯ್ಕ್ ಅವರ ಉಲ್ಲೇಖಗಳನ್ನು ಭಯೋತ್ಪಾದಕರು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದರು ಎಂದು ಆಪಾದಿಸಲಾಗಿದೆ.

ಡಾ.ಝಾಕೀರ್ ನಾಯ್ಕ್ ಅವರು ವಿಶ್ವವಿಖ್ಯಾತ ಇಸ್ಲಾಮಿಕ್ ಚಿಂತಕ ಹಾಗೂ ವಾಗ್ಮಿಯಾಗಿದ್ದು, ವೈದ್ಯಕೀಯ ಶಿಕ್ಷಣ ಪಡೆದವರು. ಎರಡು ದಶಕಗಳಿಂದ ಇವರು ಉಪನ್ಯಾಸಗಳನ್ನು ನೀಡುತ್ತಿದ್ದಾರೆ.

ಝಾಕೀರ್ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ಅಪಪ್ರಚಾರದ ಹಿಂದಿನ ಕಾರ್ಯಸೂಚಿಯ ಬಗ್ಗೆ ತನಿಖೆ ನಡೆಸುವಂತೆ ಪತ್ರಿಕಾ ಮಂಡಳಿಗೆ ಮನವಿ ಸಲ್ಲಿಸಲಾಗಿದೆ. ಜೊತೆಗೆ ಝಾಕೀರ್ ಅವರ ಕ್ಷಮೆ ಯಾಚಿಸಬೇಕು ಎಂದೂ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News