×
Ad

ಸಮಾನ ನಾಗರಿಕ ಸಂಹಿತೆ: ಕ್ರಮಗಳನ್ನು ಆರಂಭಿಸಿದ ಕಾನೂನು ಆಯೋಗ

Update: 2016-07-08 14:42 IST

ಹೊಸದಿಲ್ಲಿ, ಜುಲೈ 8: ಸಮಾನ ನಾಗರಿಕ ಸಂಹಿತೆ ಗೆ ಸಂಬಂಧಿಸಿದ ನಿರ್ದೇಶನಗಳನ್ನು ತಯಾರಿಸುವ ಕ್ರಮಕ್ಕೆ ಕಾನೂನು ಆಯೋಗ ಪ್ರಾರಂಭಿಸಿದೆ. ನಿನ್ನೆ ನಡೆದಿದ್ದ ಆಯೋಗದ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗಿದೆ ಎಂದು ಆಯೋಗಾಧ್ಯಕ್ಷ ಜಸ್ಟಿಸ್ ಬಲಬೀರ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

ಸಮಾನ ಸಮಾನ ನಾಗರಿಕ ಸಂಹಿತೆ ಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಸಂಗ್ರಹಿಸಲು ಸಂಬಂಧಿಸಿದ ವಿಭಾಗಗಳ ತಜ್ಞರೊಂದಿಗೆ ಚರ್ಚಿಸಲು ಆಯೋಗದ ಸಭೆ ನಿರ್ಧರಿಸಿದ್ದು ವರದಿ ಸಲ್ಲಿಸುವ ಸಮಯಾವಧಿಯನ್ನು ತೀರ್ಮಾನಿಸಿಲ್ಲ.

ವರದಿ ತಯಾರಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಸುವುದು ದೀರ್ಘಪ್ರಕ್ರಿಯೆಯಾಗಿದೆ. ಎಲ್ಲರ ಅಭಿಪ್ರಾಯಗಳನ್ನು ಆಲಿಸಿದ ನಂತರವೇ ವರದಿ ತಯಾರಿಸಲಾಗುತ್ತದೆ. ಹೊಸ ಕಾನೂನಿಗೆ ಸಂಬಂಧಿಸಿದ ನಿರ್ದೇಶನಗಳನ್ನು ಸರಕಾರದ ಮುಂದಿಡುವುದು ಆಯೋಗದ ಕೆಲಸವಾಗಿದೆ. ಅದನ್ನು ಕಾರ್ಯರೂಪಕ್ಕಿಳಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಬಲಬೀರ್‌ಸಿಂಗ್ ಚೌಹಾಣ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News