ಭಾರತ ಹಿಂದೂ ರಾಷ್ಟ್ರವೆಂದು ನರಸಿಂಹರಾವ್ ಹೇಳಿದ್ದರು: ಮಣಿಶಂಕರ್ ಅಯ್ಯರ್
ಹೊಸದಿಲ್ಲಿ, ಜುಲೈ 8: ಭಾರತ ಹಿಂದೂ ರಾಷ್ಟ್ರವಾಗಿದೆ ಎಂದು ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ತನ್ನೊಡನೆ ಹೇಳಿದ್ದರೆಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. 1992ರ ಅಕ್ಟೋಬರ್‌ನಲ್ಲಿ ರಾಮೇಶ್ವರದಿಂದ ಅಯೋಧ್ಯೆಗೆ ಅಯ್ಯರ್ ನಡೆಸಿದ್ದ 44 ದಿವಸಗಳ ರಾಂ ರಹೀಂ ಯಾತ್ರೆಯ ವೇಳೆ ಅಯ್ಯರ್‌ರನ್ನು ದಿಲ್ಲಿಗೆ ಕರೆಯಿಸಿಕೊಂಡು ರಾವ್ ತನ್ನ ಈ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಅಯ್ಯರ್‌ರ ಯಾತ್ರೆಗೆ ವಿರೋಧ ವ್ಯಕ್ತಪಡಿಸಿರದಿದ್ದರೂ ಜಾತ್ಯತೀತೆಗೆ ನೀಡುವ ವ್ಯಖ್ಯಾನವನ್ನು ತಾನು ಒಪ್ಪುವುದಿಲ್ಲ ಎಂದು ರಾವ್ ಆ ಸಂದರ್ಭದಲ್ಲಿ ಅಯ್ಯರ್‌ರಿಗೆ ತಿಳಿಸಿದ್ದರು. ಭಾರತ ಒಂದು ಹಿಂದೂ ರಾಷ್ಟ್ರವೆಂದು ನೀವು ಮನವರಿಕೆ ಕೊಂಡಿಲ್ಲವೆ ಎಂದು ರಾವ್ ಹೇಳಿದಾಗ ತಾನು ಸ್ತಂಭೀಭೂತನಾಗಿ ನಿಂತೆ ಎಂದು ಅಯ್ಯರ್ ತನಗಾದ ಅನುಭವವನ್ನು ವಿವರಿಸಿದ್ದಾರೆ. ಬಿಜೆಪಿಯೂ ಇದನ್ನೆ ಎತ್ತಿಹಿಡಿಯುತ್ತಿದೆ ಎಂದು ಹೇಳಿದಾಗ ರಾವ್‌ರಿಂದ ಉತ್ತರಿಸಿಗಲಿಲ್ಲ. ಬದಲಾಗಿ ಯಾತ್ರೆ ಮುಂದುವರಿಸಲು ಅನುಮತಿನೀಡಿದರು ಎಂದು ಅಯ್ಯರ್ ಬಹಿರಂಗಪಡಿಸಿದ್ದಾರೆ. ಆದ್ದರಿಂದ ಮಸೀದಿ ಧ್ವಂಸ ಮಾಡದಂತೆ ಸನ್ಯಾಸಿಗಳ ನೆರವನ್ನು ರಾವ್ ಕೇಳಿದರು. ಶಿವಸೇನೆ ಹಾಗೂ ಬಜರಂಗದಳದೊಂದಿಗೆ ಮಾತುಕತೆ ನಡೆಸಲು ಅವರು ಸಿದ್ಧರಾಗಲಿಲ್ಲ. ಸಮಸ್ಯೆಯ ರಾಜಕೀಯ ಮಾನದಂಡಗಳ ಬಗ್ಗೆ ಅವರು ಕಣ್ಣುಮುಚ್ಚಿಕುಳಿತರು ಎಂದು ಅಯ್ಯರ್ ಹಳೆಯ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.
ಪ್ರಾಚೀನ ಕಾಲದಲ್ಲಿ ರಾಜಂದಿರು ಸನ್ಯಾಸಿಗಳ ಸಲಹೆಯನ್ನು ಸ್ವೀಕರಿಸುತ್ತಿದ್ದರು ಎಂದುತನ್ನ ಕ್ರಮವನ್ನು ಮಸೀದಿ ಧ್ವಂಸವಾದ ಬಳಿಕ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ರಾವ್ ಸಮರ್ಥಿಸಿಕೊಂಡಿದ್ದರು ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.